ಮೀನುಗಾರಿಕೆ ಇಲಾಖೆಯ 2025-26ನೇ ಸಾಲಿನ ಕೇಂದ್ರ ಪುರಸ್ಕೃತ ಪ್ರಧಾನಮಂತ್ರಿ ಮತ್ತ್ವ ಸಂಪದ ಯೋಜನೆಯಡಿ ಧರ್ತಿ ಅಭಾ ಜನಜಾತೀಯ ಗ್ರಾಮ ಉತ್ತರ್ಷ ಅಭಿಯಾನ ಉಪಯೋಜನೆಗಳಡಿ ತಾಲ್ಲೂಕಿನ ಬೂದಹಳ್ಳಿ ನಾಗಲಗೆರೆ, ಎಸ್‌ಕೆಪಿ ಅಗ್ರಹಾರ ಸೋಸಲೆ, ರಾಮನಾಥಪುರಹುಂಡಿ, ಅಕ್ಕೂರು, ಕುಕ್ಕೂರು ಗ್ರಾಮಗಳ ಬುಡಕಟ್ಟು ಸಮುದಾಯದ/ಪರಿಶಿಷ್ಟ ಪಂಗಡ ಮೀನು ಮಾರಾಟಕ್ಕಾಗಿ ಐಸ್‌ಬಾಕ್ಸ್ ನೊಂದಿಗೆ ದ್ವಿಚಕ್ರ ವಾಹನ, ಐಸ್‌ಬಾಕ್ಸ್ ನೊಂದಿಗೆ ತ್ರಿಚಕ್ರ ವಾಹನ, ಜೀವಂತ ಮೀನು ಮಾರಾಟ ಕೇಂದ್ರಗಳನ್ನು ತೆರೆಯಲು ಪಿಎಂಎಂಎಸ್ ಯೋಜನೆಯಡಿ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಸದರಿ ಕಾರ್ಯಕ್ರಮಗಳಲ್ಲಿ ಘಟಕ ವೆಚ್ಚಕ್ಕೆ ಶೇ.90 ರಷ್ಟು ಸಹಾಯಧನ ನೀಡಲಾಗುವುದು. ಅರ್ಜಿ ನಮೂನೆಯನ್ನು ಸಂಬಂಧಿಸಿದ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಯಿಂದ ಪಡೆದು ಅಗತ್ಯ ದಾಖಲಾತಿಗಳೊಂದಿಗೆ ಡಿ.15 ರೊಳಗೆ ಈ ಕಚೇರಿಗೆ ಸಲ್ಲಿಸಬೇಕು. ನಿಗದಿತ ಅವಧಿಯ ನಂತರ ಸಲ್ಲಿಸುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಮೀನುಗಾರಿಕೆ ಸಹಾಯಕ ನಿರ್ದೇಶಕಿ ಕೆ.ಬಿ. ಶ್ವೇತಾ ರವರು ತಿಳಿಸಿದ್ದಾರೆ.
