HomeLatest Newsಕನಕಪುರ ಬಂಡೆ ಎಲ್ಲೆಲ್ಲಿ ನನ್ನ ಕತ್ತು ಕೊಯ್ದಿದ್ದಾರೆ ಎಂಬುದು ನನಗೆ ಗೊತ್ತು: ಸ್ವಾಮೀಜಿಗಳನ್ನು ಎಂದಿಗೂ ದೇವೆಗೌಡರು...

ಕನಕಪುರ ಬಂಡೆ ಎಲ್ಲೆಲ್ಲಿ ನನ್ನ ಕತ್ತು ಕೊಯ್ದಿದ್ದಾರೆ ಎಂಬುದು ನನಗೆ ಗೊತ್ತು: ಸ್ವಾಮೀಜಿಗಳನ್ನು ಎಂದಿಗೂ ದೇವೆಗೌಡರು ಬಳಸಿಕೊಂಡಿಲ್ಲ: H.D. ಕುಮಾರಸ್ವಾಮಿ

ಶಿವಮೊಗ್ಗ: ಇಂದಿನ ರಾಜಕಾರಣ ಅಭಿವೃದ್ಧಿ ವಿಷಯದಲ್ಲಿ ಚರ್ಚೆ ಮಾಡಲು ಸಾಧ್ಯವಿಲ್ಲ. ರಾಜ್ಯದ ಅಭಿವೃದ್ಧಿಯೇ ಈ ಸರ್ಕಾರ ಮರೆತಂತಿದೆ. ಇಲಾಖಾವಾರು ಬಜೆಟ್ ನ ಅನುದಾನವೇ ಬಿಡುಗಡೆ ಮಾಡುತ್ತಿಲ್ಲ ಎಂದು ಕೇಂದ್ರ ಕೈಗಾರಿಕಾ ಸಚಿವ ಹೆಚ್.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲಾ ಇಲಾಖೆಗಳ ಸ್ಥಿತಿ ದಯನೀಯವಾಗಿದೆ. ಯೋಜನೆಗಳಿಗೆ ಅನುದಾನ 40-45 ಪರ್ಸೆಂಟ್ ಮುಟ್ಟಲು ಸಹ ಸಾಧ್ಯವಾಗಿಲ್ಲ. ತೆರಿಗೆ ಸಂಗ್ರಹದಲ್ಲೂ ರಾಜ್ಯ ಸರ್ಕಾರ ವಿಫಲವಾಗಿದೆ. ತೆರಿಗೆ ಸಂಗ್ರಹದ 15 ಸಾವಿರ ಕೋಟಿ ನಷ್ಟವಾಗುತ್ತೆ ಎಂಬ ಮಾಹಿತಿ ಇದೆ ಎಂದರು.

ಶಾಲಾ ಕಟ್ಟಡಗಳ ಸಮಸ್ಯೆ ಹಲವಾರಿವೆ. ಸರ್ಕಾರದ ಗಮನ ಸೆಳೆಯಲು ಸರ್ಕಾರ ಗಮನ ಹರಿಸಿಲ್ಲ. 65 ಸಾವಿರ ಶಿಕ್ಷಕರ ಕೊರತೆಯನ್ನು ಈ ಸರ್ಕಾರ ನೀಗಿಸಿಲ್ಲ. 65 ಸಾವಿರ ಶಿಕ್ಷಕರ ನೇಮಕಾತಿ ಇನ್ನೂ ಮಾಡಿಲ್ಲ. ಪಬ್ಲಿಕ್ ಶಾಲೆಗಳಿಗೆ ಶಿಕ್ಷಕರ ನೇಮಕಾತಿ ಮಾಡಿಕೊಳ್ಳುತ್ತೆವೆಂದು ಹೇಳುತ್ತಾರೆ. ಆದರೆ ಇದಕ್ಕೆ ಅನುದಾನ ಎಲ್ಲಿದೆ ಎಂದು ಹೇಳುತ್ತಿಲ್ಲ. ಸಿಎಸ್ ಆರ್ ಅನುದಾನದಲ್ಲಿ 1 ಸಾವಿರ ಪಬ್ಲಿಕ್ ಶಾಲೆ ಕಟ್ಟುತ್ತೇವೆಂದು ಹೇಳಿದ್ದಾರೆ. ಆದರೆ ಕಾರ್ಖಾನೆಗಳ ಸಿಎಸ್ಆರ್ ಅನುದಾನ ಅಭಿವೃದ್ಧಿಪಡಿಸಲು ವಿನಿಯೋಗಿಸಬೇಕೆಂದು ಸಿಎಂ ಹೇಳಿದ್ದಾರೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸರ್ಕಾರದ ಜನತೆಯ ತೆರಿಗೆ ಹಣವನ್ನು ನಮ್ಮ ಅವಧಿಯಲ್ಲಿ ಬಿಡುಗಡೆ ಮಾಡಿದ್ದೆವು. ಪಬ್ಲಿಕ್ ಶಾಲೆಗಳ ಆರಂಭ ನಮ್ಮ ಕಾಲಾವಧಿಯಲ್ಲಿ ಆಗಿತ್ತು. ಸರ್ಕಾರದ ಖಜಾನೆ ಖಾಲಿಯಾಗಿದೆ ಎಂದು ಈ ಎರಡೂವರೆ ವರ್ಷದಲ್ಲಿ ನಾನೆಲ್ಲೂ ಹೇಳಿಲ್ಲ. ತೆರಿಗೆ ರೂಪದಲ್ಲಿ ಖಜಾನೆ ಖಾಲಿಯಾಗಲು ನಮ್ಮ ರಾಜ್ಯದ ಜನರು ಬಿಟ್ಟಿಲ್ಲ. ಗ್ಯಾರಂಟಿ ಯೋಜನೆಗಳ ಬಗ್ಗೆ ಸಣ್ಣ ಮಟ್ಟದಲ್ಲಿ ನಾನು ಟೀಕೆ ಮಾಡಲು ಹೋಗಲ್ಲ ಎಂದರು.

ನೀರಾವರಿ ಸಚಿವರು ನೀರಾವರಿ ಯೋಜನೆಗಿಂತಲೂ ಬೆಂಗಳೂರಿನ ಹಲವಾರು ಬಡಾವಣೆ ಹೆಸರುಗಳ ಬದಲಾವಣೆಯಲ್ಲಿ ತೊಡಗಿಕೊಂಡಿದ್ದಾರೆ. ಇವರಿಗೆ ರಾಜ್ಯದ ನೀರಾವರಿ ಸಮಸ್ಯೆ ತಿಳಿದಿಲ್ಲ. ಎಲ್ಲಿ ಎಡವಿದ್ದೆವೆಂದು ಮಾಧ್ಯಮಗಳಲ್ಲಿ ತೋರಿಸಿದರೂ ಅವರು ಬದಲಾವಣೆ ಮಾಡಿಕೊಳ್ಳುತ್ತಿಲ್ಲ. ಕೇವಲ ಖುರ್ಚಿ ಬಗ್ಗೆಯೇ ಗಮನವಿಟ್ಟುಕೊಂಡು ಕೂತಿದ್ದಾರೆ. ಆಡಳಿತದ ಬಗ್ಗೆ ನಿಗಾವೇ ಇಲ್ಲದಂತಾಗಿದೆ. ಖಜಾನೆ ಸೋರಿಕೆ ಮಾಡಲು ಗಮನ ನೀಡಿದ್ದಾರೆ ಎಂದು ದೂರಿದ್ದಾರೆ.

ಕೊಟ್ಟ ಮಾತಿನ ಬಗ್ಗೆ ಮಾದ್ಯಮಗಳು ಪ್ರಶ್ನೆ ಮಾಡಿದ್ರೆ ಸಿಎಂ ಏರುದನಿಯಲ್ಲಿ ಗದರಿದ್ದಾರೆ. ಕೊಟ್ಟ ಮಾತಿನ ಬಗ್ಗೆ ಪ್ರಶ್ನಿಸಿದ್ರೆ ನಿಮಗ್ಯಾರು ಹೇಳಿದ್ದು ಎಂದು ಗದರುತ್ತಾರೆ. ರಾಯಚೂರು, ಕೊಪ್ಪಳ ಭಾಗದಲ್ಲಿ ಎರಡನೇ ಬೆಳೆಗೆ ನೀರು ಬಿಟ್ಟಿಲ್ ಎಂದು ಹೇಳಿದ್ದಾರೆ.

ಸಿದ್ಧರಾಮಯ್ಯ ಅಧಿಕಾರಕ್ಕೆ ಬಂದಾಗ ಯಾಕೋ ಏನೋ ಪೊಲೀಸರು ಬಹಳ ಆಕ್ಟೀವ್ ಆಗುತ್ತಾರೆ ಎಂದು ಸಿಎಂ ಕಾರ್ಯ ವೈಖರಿ ಬಗ್ಗೆ ಲೇವಡಿ ಮಾಡಿದ ಕುಮಾರಸ್ವಾಮಿ, ಈ ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ಚಿನ್ನ ಕಳ್ಳಸಾಗಾಣೆಯಲ್ಲಿ ಪೊಲೀಸ್ ಅಧಿಕಾರಿ ತೊಡಗಿದ್ದರು. ಈಗ ಮೊನ್ನೆಯ ದರೋಡೆ ಪ್ರಕರಣದಲ್ಲೂ ಪೊಲೀಸರು ತೊಡಗಿಕೊಂಡಿದ್ದರು. ಇವರ ಸರ್ಕಾರದಲ್ಲಿ ಪೊಲೀಸರು ಇಂತಹ ಕೃತ್ಯದಲ್ಲಿ ತೊಡಗಿದ್ದಾರೆ. ಎಷ್ಟರ ಮಟ್ಟಿಗೆ ಕಳ್ಳಕಾಕರನ್ನು ಹಿಡಿಯಲು ಮುಂದಾಗಿದ್ದಿರಾ ಎಂದು ಪ್ರಶ್ನಿಸಿದ್ದಾರೆ.

2028 ಕ್ಕೆ ಮತ್ತೆ ಇವರ ಸರ್ಕಾರ ಬರುತ್ತೆ ಅಂತಾ ಹೇಳ್ತಿದ್ದಾರೆ. ಜನ ಏನು ರೆಡಿಯಾಗಿ ಕೂತಿದ್ದಾರಾ ಬಟನ್ ಒತ್ತೋಕೆ. ಬಿಹಾರದಲ್ಲಿ ಲಾಲು ಪ್ರಸಾದ್ ಯಾದವ್ ಪುತ್ರ ನಾನೆ ಸಿಎಂ ಅಂತಾ ಭವಿಷ್ಯ ಹೇಳಿದ್ರು. ಏನಾಯ್ತು ಅಲ್ಲಿನ ರಾಜಕೀಯ ನೋಡಿದ್ರಲ್ಲಾ. ಇವರು ಸಹ ಅದನ್ನು ಜ್ಞಾಪಿಸಿಕೊಳ್ಳಬೇಕು. ಡಿ.ಕೆ. ಶಿವಕುಮಾರ್ ನನಗೆ ವಿಶ್ವಮಾನವ ಎಂದು ಹೇಳಲಿ ಪರವಾಗಿಲ್ಲ. ನಾನು ಸರ್ವಜ್ಞನ ವಚನ ಎಂದಿಗೂ ಹೇಳಲ್ಲ. ನನ್ನದು ತಾಯಿ ಹೃದಯ ಇದ್ದಂತೆ ಹಾಗಾಗಿ ಆ ಮೂಲಕ ಜನರಿಗೆ ಸ್ಪಂದಿಸುತ್ತೇನೆ. ನನ್ನ ಅಧಿಕಾರಾವಧಿಯಲ್ಲಿ ನನಗೆ ಎಷ್ಟು ಸ್ಪಂದಿಸಿದ್ದಾರೆಂಬುದು ಗೊತ್ತಿದೆ. ಕನಕಪುರ ಬಂಡೆ ಎಂದು ಎಲ್ಲೆಲ್ಲಿ ನನ್ನ ಕತ್ತು ಕೊಯ್ದಿದ್ದಾರೆ ಎಂಬುದು ನನಗೆ ಗೊತ್ತು. ವಿಐಎಸ್ಎಲ್ ಕಾರ್ಖಾನೆಗೆ ಜೀವ ನೀಡಲು ನನಗೆ ಭಗವಂತನ ಆಶೀರ್ವಾದ ಇದೆ. ಮುಂಬರುವ ಜನವರಿ, ಫೆಬ್ರವರಿ ಗೆ 4 ಸಾವಿರ ಕೋಟಿ ಹೂಡಿಕೆಗೆ ಯೋಜನೆ ನಡೆದಿದೆ. ಮೈನಿಂಗ್ ಏರಿಯಾ ನೀಡಲು ಸಹ ಚರ್ಚೆ ನಡೆದಿದೆ ಎಂದರು.

ಒಕ್ಕಲಿಗ ಸ್ವಾಮೀಜಿಗಳ ವಿರುದ್ಧ ಮತ್ತೆ ಗರಂ ಆದ ಹೆಚ್.ಡಿ.ಕೆ., ಈ ಹಿಂದೆ ದೇವೆಗೌಡರು ಸಿಎಂ ಆಗಲು ಒಕ್ಕಲಿಗ ಸ್ವಾಮೀಜಿಗಳು ಹೇಳಿದ್ರಾ? ಆಗ ಹೇಳಿದ್ದರೆ ಅಂದೇ ಸಿಎಂ ಆಗುತ್ತಿದ್ದರು. ಸ್ವಾಮೀಜಿಗಳನ್ನು ಎಂದಿಗೂ ದೇವೆಗೌಡರು ಬಳಸಿಕೊಂಡಿಲ್ಲ. ಸಿದ್ಧರಾಮಯ್ಯನವರು ದೇವರಾಜು ಅರಸು ಅವರ ಸಾಧನೆ ಮೀರಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅವರ ಸಂಕುಚಿತ ಮನೋಭವನೆಯೇ ಅವರಿಗೆ ಮುಳುವಾಗಿದೆ. 5 ವರ್ಷಗಳ ಸಿಎಂ ಆದರೂ ಅವರ ಸಾಧನೆ ಮುರಿಯಲು ಸಾಧ್ಯವಿಲ್ಲ. ಇನ್ನೂ ಎರಡೂವರೆ ವರ್ಷ ಕಳೆದರೂ ಕೂಡ ದೇವರಾಜು ಅರಸು ಅವರ ಸಾಧನೆ ಮೀರಲು ಇವರ ಕೈಯಲ್ಲಿ ಆಗಲ್ಲ ಎಂದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular