ಬೆಂಗಳೂರು: ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಲ್ಲಿ ಮಕ್ಕಳಿಗೆ ನೀರು ಕುಡಿಯುವುದನ್ನು ನೆನಪಿಸಲು ವಾಟರ್ ಬೆಲ್ ಬಾರಿಸಬೇಕು. ಈ ಕುರಿತಾಗಿ ಶಿಕ್ಷಣ ಇಲಾಖೆ ವತಿಯಿಂದ ಸುತ್ತೋಲೆ ಹೊರಡಿಸಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ತಿಳಿಸಿದ್ದಾರೆ.
ಶಾಲಾ ಶಿಕ್ಷಣ ಇಲಾಖೆ ಆಯುಕ್ತರಿಗೆ ಈ ಕುರಿತಾಗಿ ಅವರು ಪತ್ರ ಬರೆದಿದ್ದಾರೆ. ಮಕ್ಕಳಲ್ಲಿ ಆಗಾಗ ನೀರು ಕುಡಿಯಬೇಕೆಂಬ ಅರಿವು ಇರುವುದಿಲ್ಲ. ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಶಾಲೆಗಳಲ್ಲಿ ನೀರು ಕುಡಿಯುವುದನ್ನು ನೆನಪಿಸಲು ವಾಟರ್ ಬೆಲ್ ಬಾರಿಸಬೇಕು. ಇದು ಮಕ್ಕಳ ದೇಹದ ಉಷ್ಣತೆ ನಿಯಂತ್ರಿಸುವ ಜೊತೆಗೆ ಆಹಾರ ಜೀರ್ಣಿಸಿಕೊಳ್ಳಲು ಸಹಾಯಕವಾಗಲಿದೆ. ಹೀಗಾಗಿ ಎಲ್ಲಾ ಶಾಲೆಗಳಲ್ಲಿ ವಾಟರ್ ಬೆಲ್ ಬಾರಿಸುವ ನಿಯಮ ಅನುಷ್ಠಾನಕ್ಕೆ ಸುತ್ತೋಲೆ ಹೊರಡಿಸಬೇಕೆಂದು ಅವರು ಪತ್ರದಲ್ಲಿ ಕೋರಿದ್ದಾರೆ.
