ಕಲಬುರಗಿ: ಹೊಲದಲ್ಲಿ ರಾಶಿ ಮಾಡುವಾಗ ಯಂತ್ರಕ್ಕೆ ಸಿಲುಕಿ ಮಹಿಳೆ ಮೃತಪಟ್ಟ ಘಟನೆ ಕಲಬುರಗಿ ಜಿಲ್ಲೆ ಕಮಲಾಪುರ ತಾಲೂಕಿನ ಮುದ್ದಡಗಾ ಗ್ರಾಮದಲ್ಲಿ ನಡೆದಿದೆ.
ರೈತ ಮಹಿಳೆ ಗಂಗಮ್ಮ ಸುಧಾಕರ ಹಾಗರಗಿ(35) ಮೃತಪಟ್ಟವರು. ಹೊಲದಲ್ಲಿ ಸೋಯಾಬಿನ್ ರಾಶಿ ಮಾಡುತ್ತಿದ್ದ ಅವರು ಫಸಲಿನ ಕಟ್ಟುಗಳನ್ನು ಹಾಕುವಾಗ ಯಂತ್ರಕ್ಕೆ ಸೀರೆ ಸಿಲುಕಿದೆ. ವೇಗವಾಗಿದ್ದ ಯಂತ್ರಕ್ಕೆ ಗಂಗಮ್ಮ ಅವರ ತಲೆ, ದೇಹ ಭಾಗಶಃ ಯಂತ್ರಕ್ಕೆ ಸಿಲುಕಿ ತುಂಡಾಗಿದೆ. ಇದರಿಂದಾಗಿ ಗಂಗಮ್ಮ ಮೃತಪಟ್ಟಿದ್ದಾರೆ. ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
