ಕಲಬುರಗಿ : ಕೊಲೆ ಯತ್ನ ಆರೋಪದಡಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಅವರನ್ನ ಬಂಧಿಸಲಾಗಿದೆ.
ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಮಾಶಾಳ ಗ್ರಾಮದಲ್ಲಿ ಜೇವರ್ಗಿ ತಾಲೂಕಿನ ನೆಲೋಗಿ ಪೊಲೀಸರು ಮಣಿಕಂಠ ರಾಠೋಡ್ ನನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ನಾಟಿ ಔಷಧಿ ನೀಡುತ್ತಿದ್ದ ರಶೀದ್ ಮತ್ಯಾ ಎಂಬಾತನ ಬಂಧನಕ್ಕೆ ಆಗ್ರಹಿಸಿ ಮಣಿಕಂಠ ರಾಠೋಡ್ ಜೇವರ್ಗಿಯ ನಾರಾಯಣಪುರದಲ್ಲಿ ರಶೀದ್ ಬೆಂಬಲಿಗರ ಜೊತೆ ವಾಗ್ವಾದ ನಡೆಸಿದ್ದರು. ಈ ಸಂದರ್ಭದಲ್ಲಿ ರಶೀದ್ ಮತ್ಯಾ ಕಾರು ಚಾಲಕನ ತಲೆಗೆ ಕಲ್ಲೇಟು ಬಿದ್ದಿದ್ದು, ಅವರು ಗಾಯಗೊಂಡಿದ್ದರು. ಈ ಹಿನ್ನೆಲೆ ರಶೀದ್ ಮತ್ಯಾ ಕಾರು ಚಾಲಕ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಮೇರೆಗೆ ಪೊಲೀಸರು ಮಣಿಕಂಠ ರಾಡೋಡ್ ನನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
