ಶಿವಮೊಗ್ಗ: ಜೈಲಿನೊಳಗೆ ಗಾಂಜಾ ತಂದಿದ್ದ ಜೈಲಿನ ಸಿಬ್ಬಂದಿಯನ್ನು ಗುರುವಾರ ಬಂಧಿಸಲಾಗಿದೆ. ಶಿವಮೊಗ್ಗ ಕೇಂದ್ರ ಕಾರಾಗೃಹದ ದ್ವಿತೀಯ ದರ್ಜೆ ಸಹಾಯಕ ಸಾತ್ವಿಕ್(25) ಬಂಧಿತ ಆರೋಪಿ.
ಸಾತ್ವಿಕ್ ನಿಂದ 170 ಗ್ರಾಂ ಮಾದಕ ವಸ್ತು ಗಾಂಜಾ ವಶಕ್ಕೆ ಪಡೆಯಲಾಗಿದೆ. ಕರ್ತವ್ಯಕ್ಕೆ ಹಾಜರಾಗಲು ಜೈಲಿಗೆ ಆಗಮಿಸಿದ ಸಾತ್ವಿಕ್ ಅವರನ್ನು ಜೈಲಿನ ಭದ್ರತಾ ಸಿಬ್ಬಂದಿ ಪರಿಶೀಲನೆ ನಡೆಸಿದಾಗ ಒಳ ಉಡುಪಿನಲ್ಲಿ ಗಮ್ ಟೇಪ್ ನಲ್ಲಿ ಸುತ್ತಿರುವ ಗಾಂಜಾ ಇಟ್ಟುಕೊಂಡಿರುವುದು ಪತ್ತೆಯಾಗಿದೆ.
ಈ ಬಗ್ಗೆ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ರಂಗನಾಥ್ ಅವರು ನೀಡಿದ ದೂರಿನ ಆಧಾರದ ಮೇಲೆ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಸರಣ ದಾಖಲಾಗಿದೆ.
