ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯ ಮತ ಎಣಿಕೆ ಆರಂಭವಾಗಿದ್ದು, 243 ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಲಿದೆ.
ಮತ ಎಣಿಕೆ ಆರಂಭವಾಗುತ್ತಿದ್ದಂತೆ ಆರಂಭಿಕ ಸುತ್ತುಗಳಲ್ಲಿ NDA ಮೈತ್ರಿಕೂಟ 152 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ 64, ಜೆಡಿಯು 69, ಎಲ್ಜೆಪಿ 15, heಚ್ಎಎಂ 4 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ಮಹಾಘಟಬಂಧನ್ ಮೈತ್ರಿಕೂಟ 86 ಸ್ಥಾನಗಳಲ್ಲಿ ಮುನ್ನಡೆ ಗಳಿಸಿದೆ. ಆರ್.ಜೆ.ಡಿ, 64, ಕಾಂಗ್ರೆಸ್ 17 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಲೆಫ್ಟ್ ನಾಲ್ಕು ಸ್ಥಾನಗಳಲ್ಲಿ ಮುನ್ನಡೆ ಗಳಿಸಿವೆ.
ಮಹುವಾ ಕ್ಷೇತ್ರದಲ್ಲಿ ಜನ ಶಕ್ತಿ ಜನತಾದಳದ ತೇಜ್ ಪ್ರತಾಪ್ ಯಾದವ್ ಗೆ ಹಿನ್ನಡೆಯಾಗಿದೆ.
ರಾಘೋಪುರ ಕ್ಷೇತ್ರದಲ್ಲಿ ಆರ್.ಜೆ.ಡಿ. ಅಭ್ಯರ್ಥಿ ತೇಜಸ್ವಿ ಯಾದವ್ ಮುನ್ನಡೆ ಗಳಿಸಿದ್ದಾರೆ.
ಅಲಿನಗರದಲ್ಲಿ ಬಿಜೆಪಿ ಅಭ್ಯರ್ಥಿ ಮೈಥಿಲಿ ಠಾಕೂರ್ ಮುನ್ನಡೆ ಗಳಿಸಿದ್ದಾರೆ.
ಮೋತಿಹಾರಿ ಕ್ಷೇತ್ರದಲ್ಲಿ ಬಿಜೆಪಿಯ ಪ್ರಮೋದ್ ಮುನ್ನಡೆ ಗಳಿಸಿದ್ದಾರೆ.
