ಚಿನ್ನದಂಗಡಿ ಮಾಲೀಕನ ಮುಖಕ್ಕೆ ಖಾರದಪುಡಿ ಎರಚಿ ಮಹಿಳೆಯಿಂದ ಕಳ್ಳತನಕ್ಕೆ ಯತ್ನ: ತಕ್ಷಣ ಕಳ್ಳಿಯನ್ನು ಹಿಡಿದು 19 ಬಾರಿ ಕಪಾಳಮೋಕ್ಷ ಮಾಡಿದ ಮಾಲೀಕ

ಅಹಮದಾಬಾದ್: ಚಿನ್ನ ಖರೀದಿಸಲು ಗ್ರಾಹಕಿಯಂತೆ ಬಂದ ಮಹಿಳೆಯೊಬ್ಬಳು ಚಿನ್ನದಂಗಡಿ ಮಾಲೀಕನ ಮುಖಕ್ಕೆ ಖಾರದಪುಡಿ ಎರಚಿ ಚಿನ್ನಾಭರಣ ಕಳ್ಳತನಕ್ಕೆ ಯತ್ನಿಸಿರುವ ಘಟನೆ ಗುಜರಾತ್ ನ ಅಹಮದಾಬಾದ್ ನಲ್ಲಿ ನಡೆದಿದೆ.

ಅಹಮದಾಬಾದ್ ನಗರದ ಚಿನ್ನದಂಗಡಿಯೊಂದಕ್ಕೆ ಮುಖಕ್ಕೆ ದುಪ್ಪಟ್ಟಾ ಕಟ್ಟಿಕೊಂಡು ಗ್ರಾಹಕಿಯ ಸೋಗಿನಲ್ಲಿ ಆಗಮಿಸಿದ್ದ ಮಹಿಳೆ ಚಿನ್ನದಂಗಡಿ ಮಾಲೀಕನ ಬಳಿ ಚಿನ್ನ ಖರೀದಿಸುವವಳಂತೆ ನಾಟಕವಾಡಿದ್ದಾಳೆ. ಚಿನ್ನಾಭರಣಗಳನ್ನು ತೋರಿಸುತ್ತಿದ್ದಂತೆ ಮಹಿಳೆ ತನ್ನ ಕೈಲಿದ್ದ ಖಾರದಪುಡಿಯನ್ನು ಚಿನ್ನದಂಗಡಿ ಮಾಲೀಕನ ಮುಖಕ್ಕೆ ಎರಚಿದ್ದಾಳೆ. ಕ್ಷಣಾರ್ಧದಲ್ಲಿ ಎಚ್ಚೆತ್ತ ಮಾಲೀಕ ತಕ್ಷಣ ಮಹಿಳಿಗೆ ಕಪಾಳಮೋಕ್ಷ ಮಾಡಿದ್ದಾನೆ.

ಶರವೇಗದಲ್ಲಿ ಮಹಿಳೆಯನ್ನು ಹಿಡಿದು ಮನಬಂದಂತೆ 19 ಬಾರಿ ಕಪಾಳಮೋಕ್ಷ ಮಾಡಿದ್ದು, ಬಳಿಕ ಪೊಲೀಸರಿಗೆ ಮಹಿಳೆಯನ್ನು ಹಿಡಿದು ಕೊಟ್ಟಿದ್ದಾನೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read