ಮೈಸೂರು: ಮೈಸೂರಿನಲ್ಲಿ ಫ್ಲೈಓವರ್ ನಿರ್ಮಾಣಕ್ಕೆ ಸಂಸದ ಯದುವೀರ್ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಜವಾಬ್ದಾರಿಯುತ ಅಭಿವೃದ್ಧಿ ಮೂಲಕ ಮೈಸೂರಿನಲ್ಲಿ ಪರಂಪರೆಯನ್ನು ರಕ್ಷಿಸಬೇಕಿದೆ. ಮೈಸೂರಿನಲ್ಲಿ ನಗರ ಬೆಳೆಯುತ್ತಲೇ ಇದೆ. ನಮ್ಮ ಅಭಿವೃದ್ಧಿ ಪಾರದರ್ಶಕವಾಗಿರಬೇಕು. ದತ್ತಾಂಶ ಆಧಾರಿತವಾಗಿರಬೇಕು ಪರಂಪರೆಯಲ್ಲಿ ಬೇರೂರಿರಬೇಕು. ವಿನೋಬಾ ರಸ್ತೆ ಮತ್ತು ಝಾನ್ಸಿ ರಾಣಿ ಲಕ್ಷಿಬಾಯಿ ರಸ್ತೆಯ ಪ್ರಸ್ತಾವಿತ ಮೇಲ್ಸೇತುವೆಗಳ ಬಗ್ಗೆ ನನ್ನ ಕಳವಳವನ್ನು ವ್ಯಕ್ತಪಡಿಸಿ ಈ ಪತ್ರ ಬರೆಯುತ್ತಿದ್ದೇನೆ.
ಯೋಜಿತವಲ್ಲದ ನಗರ ವಿಸ್ತರಣೆಗಾಗಿ ಜೀವಂತ ಪರಂಪರೆಯ ನಗರವಾಗಿ ಮೈಸೂರಿನ ಗುರುತನ್ನು ಅಳಿಸಬಾರದು. ಮೈಸೂರು ತನ್ನ ಸೊಬಗು, ಹಸಿರು ಸಾಂಸ್ಕೃತ್ಕತೆಯನ್ನು ಕಳ್ಳದುಕೊಳ್ಳಬಾರದು. ಅಂತಹ ಆಧುನಿಕ ಮೈಸೂರು ನಿರ್ಮಾಣ ನಮ್ಮ ಗುರುಯಾಗಬೇಕು ಎಂದು ತಿಳಿಸಿದ್ದಾರೆ.
