ಫರಿದಾಬಾದ್ : ಪ್ರೀತಿಸಲು ನಿರಾಕರಿಸಿದ ಯುವತಿ ಮೇಲೆ ಪಾಗಲ್ ಪ್ರೇಮಿಯೋರ್ವ ಗುಂಡು ಹಾರಿಸಿದ ಎಸ್ಕೇಪ್ ಆದ ಘಟನೆ ಫರಿದಾಬಾದ್ ನಲ್ಲಿ ನಡೆದಿದ್ದು, ಘಟನೆಯ ಭಯಾನಕ ವೀಡಿಯೋ ವೈರಲ್ ಆಗಿದೆ.
ಕಳೆದ ಸೋಮವಾರ ಸಂಜೆ 5 ಗಂಟೆಗೆ ಈ ಘಟನೆ ನಡೆದಿದೆ. ಯುವಕನೊಬ್ಬ ಗುಂಡು ಹಾರಿಸಿದ ಪರಿಣಾಮ 17 ವರ್ಷದ ವಿದ್ಯಾರ್ಥಿನಿ ಗಾಯಗೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಲ್ಲಭಗಢ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಶ್ಯಾಮ್ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಶ್ಯಾಮ್ ಕಾಲೋನಿ ನಿವಾಸಿ ಕನಿಷ್ಕಾ ಎಂದು ಗುರುತಿಸಲಾದ ಬಾಲಕಿಯ ಭುಜಕ್ಕೆ ಗುಂಡು ತಗುಲಿತು. ಆಕೆಯನ್ನು ಗಂಭೀರ ಸ್ಥಿತಿಯಲ್ಲಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
సీసీటీవీ ఫుటేజ్
— Telugu Scribe (@TeluguScribe) November 4, 2025
హర్యానా రాష్ట్రంలోని ఫరీదాబాద్ నగరంలో యువతిపై కాల్పులు జరిపిన దుండగుడు pic.twitter.com/fC4Oyfk6MX
