ಹಾವೇರಿ : ಆಟ ಆಡುವಾಗ ನೀರಿನ ಬಕೆಟ್ ಗೆ ಬಿದ್ದು ಮಗು ಸಾವನ್ನಪ್ಪಿದ ಘಟನೆ ಹಾವೇರಿಯಲ್ಲಿ ನಡೆದಿದೆ.
ಹಾವೇರಿಯ ಶಿವಬಸವ ನಗರದಲ್ಲಿ ಈ ಘಟನೆ ನಡೆದಿದೆ. ಬಕೆಟ್ ನಲ್ಲಿ ಬಿದ್ದು ದಕ್ಷಿತ್ ಯಳಂಬಲ್ಲಿಮಠ (1) ಎಂಬ ಮಗು ಮೃತಪಟ್ಟಿದೆ. ಮಗು ಬಕೆಟ್ ಗೆ ತಲೆಕೆಳಗಾಗಿ ಬಿದಿದ್ದು, ಕೂಡಲೇ ಇದನ್ನು ಗಮನಿಸಿದ ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಮಗುವನ್ನು ಆಸ್ಪತ್ರೆಗೆ ದಾಖಲಿಸಿಕೊಂಡ ವೈದ್ಯರು ಕೂಡಲೇ ಚಿಕಿತ್ಸೆ ನೀಡಿದ್ದಾರೆ. ಆದರೆ ಮಗು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಮನೆಯಲ್ಲಿ ಪುಟ್ಟ ಮಕ್ಕಳು ಇರುವಾಗ ಪೋಷಕರು ಎಷ್ಟು ಎಚ್ಚರ ವಹಿಸಿದರೂ ಸಾಲದು.! ಪ್ರತಿ ಕ್ಷಣ ಕೂಡ ಮಕ್ಕಳ ಮೇಲೆ ಕಣ್ಣಿಡಬೇಕು. ಇಲ್ಲವಾದಲ್ಲಿ ಇಂತಹ ದುರ್ಘಟನೆಗಳು ಸಂಭವಿಸುತ್ತದೆ.

