HomeLatest Newsಕಟ್ಟಡ ಇತರೆ ಕಾರ್ಮಿಕರಿಗೆ ಗುಡ್ ನ್ಯೂಸ್: ಎಲೆಕ್ಟ್ರಿಷಿಯನ್, ಮೇಸನ್, ವೆಲ್ಡಿಂಗ್, ಕಾರ್ಪೇಂಟರ್, ಪ್ಲಂಬರ್, ಪೇಂಟರ್ ಸೇಫ್ಟಿ...

ಕಟ್ಟಡ ಇತರೆ ಕಾರ್ಮಿಕರಿಗೆ ಗುಡ್ ನ್ಯೂಸ್: ಎಲೆಕ್ಟ್ರಿಷಿಯನ್, ಮೇಸನ್, ವೆಲ್ಡಿಂಗ್, ಕಾರ್ಪೇಂಟರ್, ಪ್ಲಂಬರ್, ಪೇಂಟರ್ ಸೇಫ್ಟಿ ಕಿಟ್ ವಿತರಣೆ

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ವಿವಿಧ ಸೇಪ್ಟಿಕಿಟ್ ವಿತರಿಸಲು ಉದ್ದೇಶಿಸಲಾಗಿದ್ದು, ಅರ್ಹ ಕಟ್ಟಡ ಕಾರ್ಮಿಕರು ಆಯಾ ಕಾರ್ಮಿಕ ನಿರೀಕ್ಷಕರ ಕಚೇರಿಯಲ್ಲಿ ನೋಂದಾಯಿಸಕೊಳ್ಳಬೇಕಿದೆ.

ಜೇಷ್ಠತೆ ಆಧಾರದಲ್ಲಿ ಮೇಸನ್ ಕಿಟ್, ವೆಲ್ಡಿಂಗ್ ಕಿಟ್, ಕಾರ್ಪೇಂಟರ್ ಕಿಟ್, ಪ್ಲಂಬರ್ ಕಿಟ್, ಪೇಂಟರ್ ಕಿಟ್ ಮತ್ತು ಎಲೆಕ್ಟ್ರಿಷಿಯನ್ ಕಿಟ್ ಸೇರಿದಂತೆ ವಿವಿಧ ಸೇಪ್ಟಿ ಕಿಟ್‌ಗಳನ್ನು ವಿತರಿಸಲಾಗುವುದು.

ಅರ್ಹರು ತಮ್ಮ ಆಧಾರ್‌ಕಾರ್ಡ್, ಮೊಬೈಲ್ ಸಂಖ್ಯೆ ಹಾಗೂ ನೋಂದಾಯಿತ ಕಟ್ಟಡ ಕಾರ್ಮಿಕರ ಚಾಲ್ತಿಯಲ್ಲಿರುವ ಗುರುತಿನ ಚೀಟಿ ಇತರೆ ದಾಖಲೆಗಳೊಂದಿಗೆ ತಮ್ಮ ವ್ಯಾಪ್ತಿಯ ಕಾರ್ಮಿಕ ನಿರೀಕ್ಷಕರ ಕಚೇರಿಯಲ್ಲಿ ಅ.31 ರೊಳಗಾಗಿ ನೋಂದಾಯಿಸಿಕೊಳ್ಳಬೇಕು. ಅವಧಿ ಮುಗಿದು ಬಂದ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕಿನ ಕಾರ್ಮಿಕ ನಿರೀಕ್ಷಕರ ಕಚೇರಿ ಹಾಗೂ ಕೌಲ್‌ಬಜಾರ್‌ನ ಮೊದಲನೇ ಗೇಟ್‌ನ ಮೊಹಮ್ಮದೀಯ ಕಾಲೇಜಿನ ಹಿಂಭಾಗದ ಬಳ್ಳಾರಿ ಉಪವಿಭಾಗದ ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಕಚೇರಿಗೆ ಸಂಪರ್ಕಿಸಬಹುದು ಕು ಎಂದು ಬಳ್ಳಾರಿ ಜಿಲ್ಲಾ ಕಾರ್ಮಿಕ ಅಧಿಕಾರಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular