HomeLatest NewsBREAKING: ವಿಡಿಯೋ ಮಾಡಿ ನಟಿಗೆ ಲೈಂಗಿಕ ಕಿರುಕುಳ, ಸಂಭಾವನೆ ನೀಡದೇ ವಂಚನೆ ಆರೋಪ: ನಟ, ನಿರ್ದೇಶಕ...

BREAKING: ವಿಡಿಯೋ ಮಾಡಿ ನಟಿಗೆ ಲೈಂಗಿಕ ಕಿರುಕುಳ, ಸಂಭಾವನೆ ನೀಡದೇ ವಂಚನೆ ಆರೋಪ: ನಟ, ನಿರ್ದೇಶಕ ಹೇಮಂತ್ ಅರೆಸ್ಟ್

ಬೆಂಗಳೂರು: ಸಿನಿಮಾ ಮಾಡುವುದಾಗಿ ಹೇಳಿ ನಟಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ನಟ, ನಿರ್ದೇಶಕ ಮತ್ತು ನಿರ್ಮಾಪಕ ಹೇಮಂತ್ ಅವರನ್ನು ಬಂಧಿಸಲಾಗಿದೆ.

ಸಂಭಾವನೆ ಕೂಡ ನೀಡದೆ ನಟಿಗೆ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಲಾಗಿದ್ದು, ಬೆಂಗಳೂರಿನ ರಾಜಾಜಿನಗರ ಠಾಣೆ ಪೊಲೀಸರು ಹೇಮಂತ್ ಅವರನ್ನು ಬಂಧಿಸಿದ್ದಾರೆ. 2022 ರಲ್ಲಿ ನಟಿಗೆ ನಟ ಹೇಮಂತ್ ಪರಿಚಯವಾಗಿದ್ದರು. ‘ರಿಚ್ಚಿ’ ಚಿತ್ರದಲ್ಲಿ ನಟಿಗೆ ಅವಕಾಶ ನೀಡಿ ಕಿರುಕುಳ ನೀಡಿದ್ದಾರೆ. ಎರಡು ಲಕ್ಷ ರೂಪಾಯಿ ಸಂಬಾವನೆ ನೀಡುವುದಾಗಿ ಅಗ್ರಿಮೆಂಟ್ ಮಾಡಿಕೊಂಡಿದ್ದರು. ಮುಂಗಡವಾಗಿ 60 ಸಾವಿರ ರೂಪಾಯಿಯನ್ನು ಹೇಮಂತ್ ನೀಡಿದ್ದರು. ಚಿತ್ರೀಕರಣ ತಡವಾಗಿದ್ದಕ್ಕೆ ನಟಿ ಬೇಸರಗೊಂಡಿದ್ದರು. ಅಶ್ಲೀಲ ಬಟ್ಟೆ ತೊಡಲು ಒತ್ತಾಯಿಸಿದ್ದರು ಎನ್ನಲಾಗಿದೆ.

ನಟಿಗೆ ಮಾಕ್ ಟೇಲ್ ನಲ್ಲಿ ಮದ್ಯ ಬೆರಸಿ ಮತ್ತು ಬರುವಂತೆ ಮಾಡಿ ಕೃತ್ಯ ಎಸಗಲಾಗಿದೆ. ಮತ್ತು ಬರಿಸಿ ಖಾಸಗಿ ಫೋಟೋ ಸೆರೆಹಿಡಿದು ಬ್ಲಾಕ್ ಮೇಲ್ ಮಾಡಿದ್ದಾಗಿ ಆರೋಪಿಸಲಾಗಿದೆ. 2023ರ ಆಗಸ್ಟ್ 5ರಂದು ಸುದ್ದಿಗೋಷ್ಠಿಗೆ ಮುಂಬೈಗೆ ಚಿತ್ರತಂಡ ತೆರಳಿದ್ದು, ನಟಿ ವಾಶ್ ರೂಮ್ ಗೆ ಹೋದಾಗ ಮದ್ಯ ಬೆರೆಸಿದ್ದರು. ಈ ವೇಳೆ ನಟಿ ಅಸ್ವಸ್ಥರಾಗಿದ್ದಾಗ ವಿಡಿಯೋ ಮಾಡಿಕೊಂಡಿದ್ದಾರೆ. ವಿಡಿಯೋ ತೋರಿಸಿ ಲೈಂಗಿಕವಾಗಿ ಬಳಸಿಕೊಳ್ಳಲು ಬ್ಲಾಕ್ ಮೇಲ್ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಲೈಂಗಿಕ ಕಿರುಕುಳ ನೀಡಿದ್ದು, ಸಂಭಾವನೆ ನೀಡದೇ ವಂಚಿಸಿರುವುದಾಗಿ ನಟಿ ದೂರು ನೀಡಿದ್ದು, ಹೇಮಂತ್ ನನ್ನು ಪೊಲೀಸರು ಬಂಧಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular