ಚಾಮರಾಜನಗರ : ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಹುಲಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಪಚ್ಚೆದೊಡ್ಡಿ ಹಾಗೂ ಪಚ್ಚಮಲ್ಲಿ , ಗೋವಿಂದರಾಜು. ಗಣೇಶ ಹಾಗೂ ಶಂಪು ಎಂದು ಗುರುತಿಸಲಾಗಿದೆ. ಹಸುವಿನ ಮಾಲೀಕ ಚಂದು ಪರಾರಿಯಾಗಿದ್ದು, ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.
ಜಿಲ್ಲೆಯ ಹನೂರು ವಲಯದ ಪಚ್ಚೆದೊಡ್ಡಿ ಗ್ರಾಮದ ಬಳಿ ಹುಲಿಯ ಅರ್ಧದೇಹ ಪತ್ತೆಯಾಗಿದ್ದು, ಮಣ್ಣಿನಲ್ಲಿ ಹುದುಗಿಡಿಸಲಾಗಿದೆ. ಮೊದಲು ವಿಷ ಹಾಕಿರುವ ದುಷ್ಕರ್ಮಿಗಳು ಸತ್ತ ನಂತರ ಹುಲಿಯ ದೇಹವನ್ನು ಕೊಡಲಿಯಿಂದ ಭಾಗ ಮಾಡಿದ್ದಾರೆ. ಹಸು ತಿಂದಿದ್ದಕ್ಕೆ ಸೇಡಿಗೆ ವಿಷ ಹಾಕಿ ಕೊಂಡಿದ್ದಾರೆ ತನಿಖೆ ವೇಳೆಸೇಡಿನ ಹತ್ಯೆ ಎನ್ನುವುದು ಬೆಳಕಿಗೆ ಬಂದಿದೆ.
ಹನೂರು ವಲಯದ ಹಚ್ಚಿದೊಡ್ಡಿ ಗ್ರಾಮದ ಸಮೀಪ ಗುರುವಾರ ಅರಣ್ಯ ಇಲಾಖೆಯ ಸಿಬ್ಬಂದಿ ಗಸ್ತು ತಿರು ಗುತ್ತಿದ್ದರು. ಈ ವೇಳೆ, ಸತ್ತ ಹುಲಿಯ ಅರ್ಧ ದೇಹ ಪತ್ತೆಯಾಗಿದೆ. ಹುಲಿಯ ತಲೆ, ಭುಜ,ಮುಂಗಾಲುಗಳು ಪತ್ತೆಯಾಗಿದ್ದು ಉಳಿದ ಭಾಗಗಳು ಸಿಕ್ಕಿರಲಿಲ್ಲ,