ಶಿವಮೊಗ್ಗ: ತುಂಗಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಊರಗಡೂರಿನಲ್ಲಿ ಹಾಡಹಗಲೇ ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಚಾಕುವಿನಿಂದ ಇರಿದ ಘಟನೆ ನಡೆದಿದೆ.
ಫರ್ದಿನ್ ಮತ್ತು ಆತನ ಸಹೋದರ ಹಾಗೂ ಸ್ನೇಹಿತ ಆರೋಪಿಗಳಾಗಿದ್ದಾರೆ. ಶಬ್ಬೀರ್ ಮತ್ತು ಶಾಬಾಜ್ ಅವರಿಗೆ ಚಾಕುವಿನಿಂದ ಇರಿಯಲಾಗಿದೆ. ಶಬ್ಬೀರ್ ಸಹೋದರಿ ಸಲ್ಮಿಯಾ ಅವರನ್ನು ಫರ್ದೀನ್ ಕೆಲವು ವರ್ಷಗಳ ಹಿಂದೆ ಮದುವೆಯಾಗಿದ್ದು, ಸ್ವಂತ ಭಾವನನ್ನೇ ಫರ್ದಿನ್ ಇರಿದಿದ್ದಾನೆ. ಇಬ್ಬರೂ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಫರ್ದೀನ್ ಮತ್ತು ಸಲ್ಮಿಯಾ ಕೆಲವು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದು, ಹುಡುಗಿಯ ಕುಟುಂಬ ಇದನ್ನು ವಿರೋಧಿಸುತ್ತಿತ್ತು. ಫರ್ದೀನ್ ಮತ್ತು ಸಲ್ಮಿಯಾ ಕೆಲವು ವರ್ಷಗಳಿಂದ ಒಟ್ಟಿಗೆ ವಾಸಿಸುತ್ತಿರಲಿಲ್ಲ. ಶಬ್ಬೀರ್ ಮತ್ತು ಶಾಬಾಜ್ ಅವರನ್ನು ಫರ್ದೀನ್ ಯಾವಾಗಲೂ ಬೆದರಿಸುತ್ತಿದ್ದ ಎನ್ನಲಾಗಿದೆ.
ಸ್ಥಳಕ್ಕೆ ಎಸ್ಪಿ ಮಿಥುನ್ ಕುಮಾರ್, ಎಎಸ್ಪಿ ಕಾರಿಯಪ್ಪ, ಪಿಐ ಗುರುರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
You Might Also Like
TAGGED:ಶಿವಮೊಗ್ಗ