ದುನಿಯಾ ಡಿಜಿಟಲ್ ಡೆಸ್ಕ್ : ಇಂಡೋನೇಷ್ಯಾದಲ್ಲಿ ಇಂದು ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.5 ತೀವ್ರತೆ ದಾಖಲಾಗಿದೆ.
ಇಂಡೋನೇಷ್ಯಾ ನಿಂದ 98 ಕಿಮೀ ದೂರ ಇರುವ ಪಪುವಾ ಎಂಬಲ್ಲಿ ಇಂದು ಮುಂಜಾನೆ 4:15 ರ ವೇಳೆಗೆ ಭೂಕಂಪ ಸಂಭವಿಸಿದೆ. ಭೂಕಂಪದಿಂದ ಜನರು ಭಯಗೊಂಡಿದ್ದು, ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.
ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.