ಬೆಂಗಳೂರು: ಒಂದು ಸಾವಿರ ರೂ.ಗೆ 20 ಶರ್ಟ್ ಆಫರ್ ನೀಡಿದ್ದರಿಂದ ಜನ ಖರೀದಿಗೆ ಮುಗಿಬಿದ್ದಿದ್ದಾರೆ. ಈ ವೇಳೆ ನೂಕುನುಗ್ಗಲು ಉಂಟಾಗಿದ್ದು, ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಹಾಸನ ಮತ್ತು ಕೊಪ್ಪಳದಲ್ಲಿ ಇಂತಹ ಘಟನೆ ಪ್ರತ್ಯೇಕ ಘಟನೆ ನಡೆದಿವೆ.
ಹಾಸನದ ರಿಂಗ್ ರಸ್ತೆಯ ಹೌಸಿಂಗ್ ಬೋರ್ಡ್ ಸಮೀಪದ ಅರುಣ್ ಅಡ್ಡ ಮೆನ್ಸ್ ವೇರ್ ಬಟ್ಟೆ ಅಂಗಡಿಯಲ್ಲಿ ಭಾನುವಾರ ಬೆಳಿಗ್ಗೆ ಒಂದು ಸಾವಿರಕ್ಕೆ 20 ಶರ್ಟ್ ಆಫರ್ ಪ್ರಕಟವಾಗಿದ್ದು, ಸಾವಿರಾರು ಮಂದಿ ಅಂಗಡಿಯ ಮುಂದೆ ಸೇರಿದ್ದರಿಂದ ನೂಕುನಗ್ಗಲು ಉಂಟಾಗಿದೆ. ಕೊನೆಗೆ ಪೊಲೀಸರು ಜನರನ್ನು ನಿಯಂತ್ರಿಸಲು ಲಘು ಲಾಠಿ ಪ್ರಹಾರಕ್ಕೆ ಮುಂದಾಗಿದ್ದಾರೆ.
ಕೊಪ್ಪಳದಲ್ಲಿಯೂ ಇದೇ ರೀತಿಯ ಘಟನೆ ನಡೆದಿದೆ. ಕೊಪ್ಪಳದ ಲೇಬರ್ ಸರ್ಕಲ್ ನಲ್ಲಿ ಹೊಸದಾಗಿ ಆರಂಭವಾದ ಆಫರ್ಸ್ ಟ್ರೆಂಡ್ಸ್ ಬಟ್ಟೆ ಅಂಗಡಿಯಲ್ಲಿ ಬಟ್ಟೆ ಖರೀದಿಗೆ ಆಫರ್ ನೀಡಿದ್ದರಿಂದ ಜನ ಮುಗಿಬಿದ್ದಿದ್ದಾರೆ. ಆರಂಭದ ದಿನವೇ ಅಂಗಡಿಯವರು 1000 ರೂ.ಗೆ 8 ಶರ್ಟ್, 1 ಸಾವಿರ ರೂ.ಗೆ 4 ಪ್ಯಾಂಟ್ ಹಾಗೂ 1,000 ರೂ.ಗೆ ಎರಡು ಜತೆ ಶೂ ಆಫರ್ ನೀಡಿದ್ದರು. ಇದರಿಂದ ನೂಕುನುಗ್ಗಲು ಉಂಟಾಗಿದ್ದು, ಪೊಲೀಸರು ಜನರನ್ನು ನಿಯಂತ್ರಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.