ಬೆಂಗಳೂರು: ಬೆಂಗಳೂರಿನಲ್ಲಿ ನಗರ ಪ್ರದಕ್ಷಿಣೆ ಹಾಕಿದ್ದೆನೆ. ರಸ್ತೆಗುಂಡಿಗಳನ್ನು ಪರಿಶೀಲಿಸಲಾಗಿದೆ. ಗುಂಡಿ ವಿಚಾರಕ್ಕೆ ಈಗಾಗಲೇ ಅಧಿಕಾರಿಯನ್ನು ಸಸ್ಪೆಂಡ್ ಮಾಡಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ರಸ್ತೆಗುಂಡಿ ಪರಿಶೀಲನೆ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಗುಂಡಿ ವಿಚಾರವಾಗಿ ಅಧಿಕಾರಿಯನ್ನು ಅಮಾನತು ಮಾಡಿದ್ದೇನೆ. ಜಲ್ಲಿ ಹಾಕಿ ಬಿಟ್ಟಿದ್ದಾರೆ. ಟಾರ್ ಹಾಕಿಲ್ಲ. ಹಾಗಾಗಿ ಅಮಾನತು ಮಾಡಲಾಗಿದೆ ಎಂದರು.
ರಸ್ತೆ ಗುಂಡಿಗಳನ್ನು 30 ದಿನಗಳಲ್ಲಿ ಮುಚ್ಚುವಂತೆ ಸೂಚನೆ ನೀಡಲಾಗಿದೆ. ಎಲ್ಲಾ ಕಸಗಳನ್ನು ತೆಗೆಯಲು ಹೇಳಿದ್ದೇನೆ. ಇನ್ಮುಂದೆ ಹೀಗೆಯೇ ಮುಂದುವರಿದರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಮಳೆ ಆಗಿರುವುದರಿಂದ ಗುಂಡಿ ಜಾಸ್ತಿಯಾಗಿದೆ. ರಸ್ತೆಗುಂಡಿ ಮುಚ್ಚಿಲ್ಲವೆಂದರೆ ಕಮಿಷನರ್, ಅಧಿಕಾರಿಗಳೇ ನೇರ ಹೊಣೆ ಎಂದು ಎಚ್ಚರಿಕೆ ನೀಡಿದರು.
ಬೆಂಗಳೂರಿನಲ್ಲಿ ರಸ್ತೆಗುಂಡಿಗಳಿಲ್ಲ ಎಂದು ನಾನು ಹೇಳಿಲ್ಲ, ನಾನು ಬಿಜೆಪಿಯವರ ಮೇಲೆ ಆರೋಪ ಮಾಡುವುದೂ ಇಲ್ಲ. ಬಿಜೆಪಿಯವರು ರಸ್ತೆಗುಂಡಿ ಮುಚ್ಚಿಲ್ಲ ಎಂದು ನಾನು ಅದನ್ನು ಹೇಳಲ್ಲ. ನಾವು ಈಗ ಅಧಿಕಾರದಲ್ಲಿ ಇದ್ದೇವೆ. ನಾವು ಗುಂಡಿ ಮುಚ್ಚುತ್ತೇವೆ ಎಂದು ಹೇಳಿದರು.