ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರಸ್ತೆಗುಂಡಿಗಳ ವಿಚಾರವಾಗಿ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಬೆಂಗಳೂರಿನಲ್ಲಿ ಮಾತ್ರವಲ್ಲ, ದೆಹಲಿಯಲ್ಲಿ ಪ್ರಧಾನಿ ಮೋದಿ ಮನೆ ಮುಂದೆಯೂ ಎಷ್ಟು ಗುಂಡಿಗಳಿವೆ ನೋಡಿ ಎಂದಿದ್ದಾರೆ.
ಬೆಂಗಳುರಿನಲ್ಲಿ ಸುದ್ದಿಗಾರರೊಂದಿಗೆ ಮಾತನಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ನಡೆಯುತ್ತಿದೆ. ಜಿಬಿಎ ಅಧಿಕಾರಿಗಳು ರಸ್ತೆ ಗುಂಡಿ ಮುಚ್ಚುತ್ತಿದ್ದಾರೆ. ನಾನು ದೆಹಲಿಗೆ ಹೋಗಿದ್ದೆ. ಬೆಂಗಳೂರಿನಲ್ಲಿ ಮಾತ್ರವಲ್ಲ ದೆಹಲಿಯಲ್ಲಿಯೂ ರಸ್ತೆಗುಂಡೊಗಳಿವೆ. ದೆಹಲಿಯಲ್ಲಿ ಒಂದು ಸುತ್ತಿ ಬಂದು ನೋಡಿದೆ. ಪ್ರಧಾನಿ ಮೋದಿಯವರ ಮನೆ ಮುಂದೆಯೂ ರಸ್ತೆ ಗುಂಡಿಗಳಿವೆ. ಪ್ರಧಾನಿಗಳ ಮನೆ ಮುಂದೆ ಎಷ್ಟು ರಸ್ತೆಗುಂಡಿಗಳಿವೆ ನೋಡಿ. ಇದು ಬರಿ ಬೆಂಗಳೂರು, ಕರ್ನಾಟಕದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿಯೂ ಇದೇ ರೀತಿ ಸಮಸ್ಯೆಗಳಿವೆ. ಆದರೆ ನಾವು ರಸ್ತೆಗುಂಡಿ ಸರಿಪಡಿಸುವ ಕೆಲಸ ಮಾಡುತ್ತಿದ್ದೇವೆ.
ಮಾಧ್ಯಮದವರು, ಐಟಿ ಕಂಪನಿಗಳು ಬರಿ ಬೆಂಗಳೂರಿನಲ್ಲಿ, ಕರ್ನಾಟಕದಲ್ಲಿ ಮಾತ್ರ ಈರೀತಿ ರಸ್ತೆ ಗುಂಡಿಗಳಿವೆ ಎಂದು ಬಿಂಬಿಸುವುದನ್ನು ಬಿಡಿ ದೇಶದ ಎಲ್ಲಾ ರಾಜ್ಯಗಳಲ್ಲಿಯೂ ರಸ್ತೆಗುಂಡಿ ಸಮಸ್ಯೆಗಳಿವೆ. ನಮ್ಮ ರಾಜ್ಯದಲ್ಲಿ ರಸ್ತೆ ಗುಂಡಿ ಮುಚ್ಚಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ನಮ್ಮ ಕರ್ತವ್ಯ ನಾವು ಮಾಡುತ್ತಿದ್ದೇವೆ ಎಂದು ಹೇಳಿದರು.