ಜೈಪುರ: ಮಗ ಮಹಾಶಯನೊಬ್ಬ ಹೆತ್ತ ತಾಯಿಯನ್ನು ದೊಣ್ಣೆಯಿಂದ ಹೊಡೆದು ಕೊಂದಿರುವ ಹೃದಯವಿದ್ರಾವಕ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.
ಜೈಪುರದ ಕರ್ಧಾನಿಯ ಅರುಣ್ ವಿಹಾರ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ನವೀನ್ ತಾಯಿಯನ್ನೇ ಕೊಂದಿರುವ ಮಗ. ಮನೆಯಲ್ಲಿ ಸಿಲಿಂಡರ್ ಖಾಲಿಯಾಗಿತ್ತು. ವೈಫೈ ರಿಚಾರ್ಜ್ ಮಾಡಿರಲಿಲ್ಲ. ಇದರಿಂದ ಬೇಸರಗೊಂಡ ತಾಯಿ, ಮಗನಿಗೆ ಕಿಂಚಿತ್ತೂ ಜವಾಬ್ದಾರಿ ಎಂಬುದಿಲ್ಲ. ಯಾವುದೇ ಕೆಲಸ ಮಾಡುತ್ತಿಲ್ಲ ಎಂದು ಬೈದಿದ್ದಾರೆ. ಇದರಿಂದ ಕೋಪಗೊಂಡ ಮಗ ನವೀನ್ ರಾಕ್ಷಸನಂತೆ ವರ್ತಿಸಿದ್ದಾನೆ.
ದೊಣ್ಣೆಯನ್ನು ಹಿಡಿದು ಬಂದು ಮನಸೋ ಇಚ್ಛೆ ತಾಯಿಗೆ ಹೊಡೆದಿದ್ದಾನೆ. ನವೀನ್ ನ ತಂದೆ ಹಾಗೂ ಸಹೋದರಿ, ಆತನನ್ನು ತಡೆಯಲು ಯತ್ನಿಸಿದ್ದಾರೆ. ಆದರೂ ಸಾಧ್ಯವಾಗಿಲ್ಲ. ದೊಣ್ಣೆಯಿಂದ ತಾಯಿಗೆ ಮನಬಂದಂತೆ ಹೊಡೆದಿದ್ದಾನೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರ್ರೆದೊಯ್ಯಲಾಯಿತು. ಆದರೆ ತಲೆ ಅಹಗೂ ಕಿವಿಯ ಭಾಗಕ್ಕೆ ಗಂಭೀರವಾಗ ಏಟು ಬಿದ್ದಿದ್ದ ಪರಿಣಾಮ ಅವರು ಸಾವನ್ನಪ್ಪಿದ್ದರು.
ನವೀನ್ ಮಾದಕ ವ್ಯಸನಿಯಾಗಿದ್ದು, 2020ರಲ್ಲಿ ವಿವಾಹವಾಗಿದ್ದ. ಆತನ ಕುಡಿತದ ಚಟಕ್ಕೆ ಮನನೊಂದ ಪತ್ನಿ ಜೀವನ ಸಾಗಿಸಲಾಗದೇ ಆತನನ್ನು ಬಿಟ್ಟು ಹೋಗಿದ್ದಾಳೆ. ನವೀನ್ ತಂದೆ ನಿವೃತ್ತ ಸೇನಾ ಸಿಬ್ಬಂದಿ. ಪ್ರಸ್ತುಯ ಕಾನ್ ಸ್ಟೆಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸದ್ಯ ಆರೋಪಿ ನವೀನ್ ನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.