HomeLatest Newsಪ್ರವಾಸಿಗರಿಗೆ ಗುಡ್ ನ್ಯೂಸ್: ಜೋಗ್ ಫಾಲ್ಸ್, ಗೋಕಾಕ್ ಫಾಲ್ಸ್ ಗೆ ವಿಶೇಷ ಸಾರಿಗೆ ಬಸ್ ಕಾರ್ಯಾಚರಣೆ

ಪ್ರವಾಸಿಗರಿಗೆ ಗುಡ್ ನ್ಯೂಸ್: ಜೋಗ್ ಫಾಲ್ಸ್, ಗೋಕಾಕ್ ಫಾಲ್ಸ್ ಗೆ ವಿಶೇಷ ಸಾರಿಗೆ ಬಸ್ ಕಾರ್ಯಾಚರಣೆ

ಬಳ್ಳಾರಿಯಿಂದ ಜೋಗ್ ಫಾಲ್ಸ್ ಮತ್ತು ಗೋಕಾಕ್ ಫಾಲ್ಸ್ ಪ್ರವಾಸಿ ತಾಣಗಳಿಗೆ ಹೋಗುವ ಪ್ರಯಾಣಿಕರ ಅನುಕೂಲಕ್ಕಾಗಿ ವಾರಾಂತ್ಯದ ದಿನಗಳಲ್ಲಿ ವಿಶೇಷ ವೇಗದೂತ ಸಾರಿಗೆ ಸೌಲಭ್ಯವನ್ನು ಬಳ್ಳಾರಿ ವಿಭಾಗದಿಂದ ಕಲ್ಪಿಸಲಾಗಿದೆ.

ಬಳ್ಳಾರಿ-ಜೋಗ್ ಫಾಲ್ಸ್:

ಬಳ್ಳಾರಿಯಿಂದ ಬೆಳಿಗ್ಗೆ 6 ಗಂಟೆಗೆ ಹೊರಟು, ಮಧ್ಯಾಹ್ನ 2 ಗಂಟೆಗೆ ಜೋಗ್ ಫಾಲ್ಸ್ ಗೆ ತಲುಪಲಿದೆ(ವಯಾ ಬಳ್ಳಾರಿ-ಚಳ್ಳಕೆರೆ- ಚಿತ್ರದುರ್ಗ- ಚನ್ನಗಿರಿ- ಶಿವಮೊಗ್ಗ- ಸಾಗರ-ಜೋಗ್ ಫಾಲ್ಸ್). ಜೋಗ್ ಫಾಲ್ಸ್ ನಿಂದ ರಾತ್ರಿ 8 ಗಂಟೆಗೆ ಅಲ್ಲಿಂದ ಹೊರಟು ಮರುದಿನ ಬೆಳಿಗ್ಗೆ 4 ಗಂಟೆಗೆ ಬಳ್ಳಾರಿಗೆ ತಲುಪಲಿದೆ. ಪ್ರಯಾಣ ದರ- 570 ರೂ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಸಾರಿಗೆಯು ಸೆ.13 ರಿಂದ ಪ್ರತಿ ಶನಿವಾರ ಮತ್ತು ಪ್ರತಿ ರವಿವಾರ ಕಾರ್ಯಾಚರಣೆ ಮಾಡಲಾಗುವುದು.

ಬಳ್ಳಾರಿ-ಗೋಕಾಕ್ ಫಾಲ್ಸ್:

ಬಳ್ಳಾರಿಯಿಂದ ಬೆಳಿಗ್ಗೆ 6 ಗಂಟೆಗೆ ಹೊರಟು ಮಧ್ಯಾಹ್ನ 01.15 ಕ್ಕೆ ಗೋಕಾಕ್ ಫಾಲ್ಸ್ ಗೆ ತಲುಪಲಿದೆ(ವಯಾ ಹೊಸಪೇಟೆ-ಕೊಪ್ಪಳ- ಗದಗ- ನವಲಗುಂದ- ನರಗುಂದ- ಹುಲಿಕಟ್ಟಿ- ಮನೊಳ್ಳಿ- ಯರಗಟ್ಟಿ- ಮಮದಾಪುರ). ಗೋಕಾಕ್ ಫಾಲ್ಸ್ ನಿಂದ ರಾತ್ರಿ 8 ಗಂಟೆಗೆ ಅಲ್ಲಿಂದ ಹೊರಟು ಮರುದಿನ ಬೆಳಿಗ್ಗೆ 4 ಗಂಟೆಗೆ ಬಳ್ಳಾರಿಗೆ ತಲುಪಲಿದೆ. ಪ್ರಯಾಣ ದರ- 515 ರೂ.

ಈ ಸಾರಿಗೆಗೆ www.ksrtc.in ಗೆ ಲಾಗ್-ಇನ್ ಆಗುವ ಮೂಲಕ ಆನ್ ಲೈನ್ ಮುಖಾಂತರ ಮುಂಗಡ ಆಸನಗಳನ್ನು ಕಾಯ್ದಿರಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊ.7760992163, 7760992164 ಮತ್ತು 7760992167 ಗೆ ಸಂಪರ್ಕಿಸಬಹುದು.

ಈ ವಿಶೇಷ ಸಾರಿಗೆ ಸೌಲಭ್ಯವನ್ನು ಸಾರ್ವಜನಿಕ ಪ್ರಯಾಣಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಳ್ಳಾರಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular