BREAKING : ರಾಜ್ಯದಲ್ಲಿ ‘ಫಾರಿನ್’ ಗೆ ‘ಅನ್ನಭಾಗ್ಯದ ಅಕ್ಕಿ’ ಕಳುಹಿಸುತ್ತಿದ್ದ ಬೃಹತ್ ಜಾಲ ಪತ್ತೆ : 6000 ಟನ್ ಅಕ್ಕಿ ಜಪ್ತಿ..!


ಬೆಂಗಳೂರು : ಫಾರಿನ್ ಗೆ ಅನ್ನಭಾಗ್ಯದ ಅಕ್ಕಿ ಕಳುಹಿಸುತ್ತಿದ್ದ ಜಾಲವೊಂದನ್ನು ಆಹಾರ ಇಲಾಖೆ ಅಧಿಕಾರಿಗಳು ಪತ್ತೆ ಮಾಡಿದ್ದು, 6000 ಟನ್ ಅಕ್ಕಿ ಜಪ್ತಿ ಮಾಡಿಕೊಂಡಿದ್ದಾರೆ.

ಬಿಪಿಎಲ್ , ಎಪಿಎಲ್ ಕಾರ್ಡ್ ದಾರರಿಗೆ ವಿತರಿಸುತ್ತಿದ್ದ ಅಕ್ಕಿಯನ್ನು ಪಾಲಿಶ್ ಮಾಡಿ ದುಬೈ, ಫ್ರಾನ್ಸ್ ದೇಶಗಳಿಗೆ ರಫ್ತು ಮಾಡಲಾಗುತ್ತಿತ್ತು. ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಸುಮಾರು 6000 ಟನ್ ಅಕ್ಕಿ ಸೀಜ್ ಮಾಡಿದ್ದಾರೆ.

ಜಿಲ್ಲೆಯ ಹಲವು ಕಡೆಯಿಂದ ಅಕ್ಕಿ ಸಂಗ್ರಹಿಸಿ ತಂದು ಅದನ್ನು ಪಾಲಿಶ್ ಮಾಡಿ ಅದಕ್ಕೊಂದು ಬ್ರ್ಯಾಂಡ್ ಹೆಸರು ಕೊಟ್ಟು ದುಬೈ, ಫ್ರಾನ್ಸ್ ಇನ್ನಿತರ ರಾಷ್ಟ್ರಗಳಿಗೆ ಕಳುಹಿಸಲು ಸಂಚು ರೂಪಿಸಲಾಗುತ್ತಿತ್ತು. ಹೊರ ದೇಶದಲ್ಲಿ ಅಕ್ಕಿಗೆ ಭಾರಿ ರೇಟ್ ಇದೆ. ಒಳ್ಳೆ ಗುಣಮಟ್ಟದ ಅಕ್ಕಿ ಎಂದು ಅಲ್ಲಿ ಮಾರಾಟ ಮಾಡಿ ಹಣ ಮಾಡುವ ದಂಧೆ ನಡೆಯುತ್ತಿತ್ತು.
ಆಹಾರ ಇಲಾಖೆಯ ಅಧಿಕಾರಿಗಳು ಶುಕ್ರವಾರ ರಾತ್ರಿ ಯಾದಗಿರಿ ಜಿಲ್ಲೆ ಗುರುಮಠಕಲ್ ನ ಶ್ರೀ ಲಕ್ಷ್ಮೀ ವೆಂಕಟೇಶ್ವರ ಇಂಡಸ್ಟ್ರೀಸ್ ಮೇಲೆ ದಾಳಿ ನಡೆಸಿ ಅಕ್ಕಿ ಜಪ್ತಿ ಮಾಡಿಕೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read