HomeLatest NewsBIG NEWS: ಕುಸಿದು ಬಿದ್ದ ಕಾರ್ಗೋ ರೋಪ್ ವೇ: 6 ಜನರು ದುರ್ಮರಣ

BIG NEWS: ಕುಸಿದು ಬಿದ್ದ ಕಾರ್ಗೋ ರೋಪ್ ವೇ: 6 ಜನರು ದುರ್ಮರಣ

ಪಂಚಮಹಲ್: ಕಾರ್ಗೋ ರೋಪ್ ವೇ ಕುಸಿದು ಬಿದ್ದ ಪರಿಣಾಮ 6 ಜನರು ಸಾವನ್ನಪ್ಪಿರುವ ಘಟನೆ ಗುಜರಾತ್ ನ ಪಂಚಮಹಲ್ ಜಿಲ್ಲೆಯ ಪಾವಗಡ ಬೆಟ್ಟದ ದೇವಸ್ಥಾನದ ಬಳಿ ನಡೆದಿದೆ.

ನಿರ್ಮಾಣ ಕಾಮಗಾರಿಗಾಗಿ ರೋಪ್ ವೇ ಟ್ರಾಲಿಯಲ್ಲಿ ಕೆಲ ವಸ್ತುಗಳನ್ನು ಸಾಗಿಸಲಾಗುತ್ತಿತ್ತು. ಈ ವೇಳೆ ರೋಪ್ ವೇ ಟ್ರಾಲಿ ಏಕಾಏಕಿ ಮುರಿದು ಬಿದ್ದಿದೆ. ಸ್ಥಳದಲ್ಲೇ 6 ಜನರು ಸಾವನ್ನಪ್ಪಿದ್ದಾರೆ. ಪಾವಗಡ ಬೆಟ್ಟದ ಶಕ್ತಿಪೀಠದ ಬಳಿ ಈ ದುರಂತ ಸಂಭವಿಸಿದೆ.

ಮೃತರ ಪೈಕಿ ಇಬ್ಬರು ಲಿಫ್ಟ್ ಆಪರೇಟರ್ ಗಳು, ಇಬ್ಬರು ಕಾರ್ಮಿಕರು ಹಾಗೂ ಇತರ ಇಬ್ಬರು ಎಂದು ಗುರುತಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ಡಿಸಿಪಿ ಹರ್ಷ ದುಧಾರ್ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪಾವಗಡ ಬೆಟ್ಟದ ದೇವಾಲಯ ಕಾಳಿ ಮಾತೆಗೆ ಸೇರಿದ ದೇವಾಲಯವಾಗಿದ್ದು, ಶಕ್ತಿಪೀಠ ಎಂದೇ ಪ್ರಸಿದ್ಧಿಪಡೆದಿದೆ. ಈ ದೇವಾಲಯಕ್ಕೆ ಹೋಗಬೇಕಾದರೆ ಯಾತ್ರಿಕರು 2000 ಮೆಟ್ಟಿಲುಗಳನ್ನು ಹತ್ತಬೇಕು ಇಲ್ಲವೇ ಕೇಬಲ್ ಕಾರುಗಳ ಮೂಲಕ ಸಾಗಿ ದೇವರ ದರ್ಶನ ಪಡೆಯಬೇಕು. ಇಂದು ಪ್ರತಿಕೂಲ ಹವಾಮಾನ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ, ಯಾತ್ರಿಕರಿಗೆ ರೋಪ್ ವೇ ಸ್ಥಗಿತಗೊಳಿಸಲಾಗಿತ್ತು. ರೋಪ್ ವೇ ನಲ್ಲಿ ಕಟ್ಟಡ ಸಾಮಗ್ರಿ ಸಾಗಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ.

For Latest News Updates, Join Our Whatsapp Community🚩
RELATED ARTICLES

Most Popular