HomeLatest NewsBREAKING : ಬೆಂಗಳೂರಿನಲ್ಲಿ ಘೋರ ದುರಂತ :   'ಕಾರ್ಖಾನೆಯ ಲಿಫ್ಟ್' ಗೆ ಸಿಲುಕಿ ಕಾರ್ಮಿಕ...

BREAKING : ಬೆಂಗಳೂರಿನಲ್ಲಿ ಘೋರ ದುರಂತ :   ‘ಕಾರ್ಖಾನೆಯ ಲಿಫ್ಟ್’ ಗೆ ಸಿಲುಕಿ ಕಾರ್ಮಿಕ ದುರ್ಮರಣ.!

ಬೆಂಗಳೂರು : ಬೆಂಗಳೂರಿನಲ್ಲಿ ಘೋರ ದುರಂತ ಸಂಭವಿಸಿದ್ದು, ಕಾರ್ಖಾನೆಯ ಲಿಫ್ಟ್ ಗೆ ಸಿಲುಕಿ ಕಾರ್ಮಿಕನೋರ್ವ ಮೃತಪಟ್ಟಿರುವ ಘಟನೆ ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕೇಕ್ ತಯಾರಿಸುವ ಕಾರ್ಖಾನೆಯಲ್ಲಿ ಸಾಮಗ್ರಿ ಸಾಗಿಸುವಾಗ ಈ ಘಟನೆ ನಡೆದಿದೆ. ಮೃತರನ್ನು ಬೆಟ್ಟಹಲಸೂರು ನಿವಾಸಿ ಭೂಪೇಂದ್ರ ಚೌಧರಿ (19) ಎಂದು ಗುರುತಿಸಲಾಗಿದೆ.

ಕೇಕ್ ಫ್ಯಾಕ್ಟರಿ ಕಟ್ಟಡದ ಕೆಳ ಮಹಡಿಯಿಂದ 2 ನೇ ಮಹಡಿಗೆ ಬಿಸ್ಕತ್ ತೆಗೆದುಕೊಂಡು ಲಿಫ್ಟ್ ನಲ್ಲಿ ಹೋಗುತ್ತಿದ್ದನು. ಆತ ಕೆಳಗೆ ಬಾಗಿದ್ದರಿಂದ 2 ನೇ ಮಹಡಿಯಲ್ಲಿರುವ ಗೋಡೆ ಆತನ ತಲೆಗೆ ತಗುಲಿದ್ದು, ಗಂಭೀರ ಗಾಯಗೊಂಡ ಯುವಕ ರಕ್ತಸ್ರಾವದಿಂದ ಮೃತಪಟ್ಟಿದ್ದಾನೆ ಎನ್ನಲಾಗಿದೆ.ಈ ಸಂಬಂಧ ಮೃತನ ಸಂಬಂಧಿ ದೂರು ನೀಡಿದ್ದು, ಅದರನ್ವಯ ಲಕ್ಷ್ಮೀ ಬಿ.ಕೆ ಆಂಡ್ ಫ್ಯಾಕ್ಟರಿಯ ಮೇಲ್ವಿಚಾರಕ ರಾಜಶೇಖರ್ ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular