HomeLatest News‘ಮೇಕ್ ಇನ್ ಇಂಡಿಯಾ': ಸ್ಮಾರ್ಟ್ ಫೋನ್ ತಯಾರಿಕೆ, ರಫ್ತಿನಲ್ಲಿ ಮಹತ್ವದ ಸಾಧನೆ: ಚೀನಾ ಹಿಂದಿಕ್ಕಿದ ಭಾರತ

‘ಮೇಕ್ ಇನ್ ಇಂಡಿಯಾ’: ಸ್ಮಾರ್ಟ್ ಫೋನ್ ತಯಾರಿಕೆ, ರಫ್ತಿನಲ್ಲಿ ಮಹತ್ವದ ಸಾಧನೆ: ಚೀನಾ ಹಿಂದಿಕ್ಕಿದ ಭಾರತ

ನವದೆಹಲಿ: ಸ್ಮಾರ್ಟ್ ಫೋನ್ ಗಳ ತಯಾರಿಕೆಯಲ್ಲಿ ಭಾರತ ಮಹತ್ವದ ಮೈಲುಗಲ್ಲು ಸಾಧಿಸಿದೆ. ಅಮೆರಿಕಕ್ಕೆ ರಫ್ತು ಮಾಡುವ ಸ್ಮಾರ್ಟ್ ಫೋನ್ ಗಳ ಪ್ರಮಾಣದಲ್ಲಿ ಭಾರತ ಚೀನಾ ದೇಶವನ್ನು ಹಿಂದಿಕ್ಕಿದೆ ಎಂದು ಸಂಶೋಧನಾ ಸಂಸ್ಥೆ ಕನಾಲಿಸ್ ವರದಿ ಮಾಡಿದೆ.

ಮೇಕ್ ಇನ್ ಇಂಡಿಯಾ ಮೊದಲಾದ ಯೋಜನೆಗಳಿಂದಾಗಿ ಭಾರತದ ಔದ್ಯಮಿಕ ಕ್ಷೇತ್ರದಲ್ಲಿ ಭಾರತ ಮಹತ್ವದ ಸಾಧನೆ ಮಾಡಿದೆ. ಅಮೆರಿಕಕ್ಕೆ ಸ್ಮಾರ್ಟ್ ಫೋನ್ ಗಳ ರಫ್ತುವಿನಲ್ಲಿ ಚೀನಾವನ್ನು ಭಾರತ ಹಿಂದಿಕ್ಕಿದೆ. ಭಾರತದ ಪಾಲು ಶೇಕಡ 44ಕ್ಕೆ ಏರಿಕೆಯಾಗಿದ್ದು, ಚೀನಾ ಪಾಲು ಶೇಕಡ 25ಕ್ಕೆ ಇಳಿಕೆಯಾಗಿದೆ. ಈ ವರ್ಷದ ಏಪ್ರಿಲ್ -ಜೂನ್ ವರೆಗಿನ ಎರಡನೇ ತ್ರೈಮಾಸಿಕದಲ್ಲಿ ಅಮೆರಿಕಕ್ಕೆ ಸ್ಮಾರ್ಟ್ ಫೋನ್ ಗಳ ರಫ್ತಿನಲ್ಲಿ ಚೀನಾವನ್ನು ಭಾರತ ಹಿಂದಿಕ್ಕಿದೆ. ಕಳೆದ ವರ್ಷ ಈ ಪಾಲು ಶೇಕಡ 31 ರಷ್ಟು ಇತ್ತು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular