ಕಲಬುರಗಿ: ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ದಂಡೋತಿ ಗ್ರಾಮದಲ್ಲಿ ಮಂಗವೊಂದು ಏಕಾಏಕಿ ದಾಳಿ ನಡೆಸಿ ಮೂವರನ್ನು ಕಚ್ಚಿ ಗಂಭೀರವಾಗಿ ಗಾಯಗೊಂಳಿಸಿರುವ ಘಟನೆ ನಡೆದಿದೆ.
ಮಂಗನ ದಾಳಿಗೆ ಗ್ರಾಮದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗ್ರಾಮದ ನೀಲಮ್ಮ, ಅಪ್ಪು ಪ್ರಕಾಶ್ ಹಾಗೂ ಮೊಹಮ್ಮದ್ ಫಾರೂಕ್ ಎಂಬುವವರ ಮೇಲೆ ಮಂಗ ದಾಳಿ ನಡೆಸಿದೆ. ಮೂವರ ಕಾಲು, ಕೈಗಳಿಗೆ ಕಚ್ಚಿ ಗಾಯಗೊಳಿಸಿದೆ.
ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗನ ಹಾವಳಿಗೆ ಗ್ರಾಮಸ್ಥರು ಹೈರಾಣಾಗಿದ್ದು, ಮಂಗನ ಸೆರೆ ಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ.