HomeLatest NewsBREAKING : ಹಿಂದೂ ಯುವಕರು 'ಮುಸ್ಲಿಂ' ಯುವತಿಯರನ್ನ ಮದುವೆಯಾದ್ರೆ 5 ಲಕ್ಷ ರೂ. ಘೋಷಣೆ :...

BREAKING : ಹಿಂದೂ ಯುವಕರು ‘ಮುಸ್ಲಿಂ’ ಯುವತಿಯರನ್ನ ಮದುವೆಯಾದ್ರೆ 5 ಲಕ್ಷ ರೂ. ಘೋಷಣೆ : ಶಾಸಕ ಯತ್ನಾಳ್ ವಿರುದ್ಧ ‘FIR’ ದಾಖಲು

ಕಲಬುರಗಿ :   ಶಾಸಕ ಬಸನಗೌಡ ಪಾಟೀಲ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಕಲಬುರಗಿ ನಗರದ ರೋಜಾ ಠಾಣೆಯಲ್ಲಿ ಅವರ ವಿರುದ್ಧ ದೂರು ದಾಖಲಾಗಿದೆ. ಮುಸ್ಲಿಂ ಯುವತಿ ಮದುವೆಯಾದವರಿಗೆ 5 ಲಕ್ಷ ರೂಪಾಯಿ ಕೊಡಲಾಗುವುದು ಎಂದು ಘೋಷಿಸಿದ ಆರೋಪದ ಮೇಲೆ ಅವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

ಮುಸ್ಲಿಂ ಯುವತಿ ಪ್ರೀತಿಸಿ ಕೊಲೆಯಾದ ಗವಿಸಿದ್ದಪ್ಪ ಅವರ ಮನೆಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭೇಟಿ ನೀಡಿದ್ದರು.  ಕೊಪ್ಪಳದ ಕುರುಬರ ಓಣಿಯಲ್ಲಿರುವ ಗವಿಸಿದ್ದಪ್ಪ ನಿವಾಸಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದರು.  ಆಗಸ್ಟ್ 3ರಂದು ಕೊಪ್ಪಳದಲ್ಲಿ ಗವಿಸಿದ್ದಪ್ಪ ಕೊಲೆ ಮಾಡಲಾಗಿತ್ತು.

ಭೇಟಿ ಬಳಿಕ ಮಾತನಾಡಿದ ವಿಜಯಪುರ ಶಾಸಕ ಯತ್ನಾಳ್, ಮುಸ್ಲಿಂ ಯುವತಿ ಮದುವೆಯಾದವರಿಗೆ 5 ಲಕ್ಷ ರೂಪಾಯಿ ಕೊಡಲಾಗುವುದು. ಈ ರೀತಿಯ ಅಭಿಯಾನ ಆರಂಭಿಸುತ್ತೇವೆ. ಹಿಂದೂಗಳನ್ನು ಕೊಲೆ ಮಾಡುವ ಮನಸ್ಥಿತಿ ಮುಸ್ಲಿಮರಲ್ಲಿದೆ. ರೀಲ್ಸ್ ನಲ್ಲಿ ಮಚ್ಚು ತೋರಿಸಿದ್ದಾನೆ. ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಗವಿಸಿದ್ದಪ್ಪ ಪ್ರೀತಿಸಿದ್ದ ಹುಡುಗಿಯನ್ನು ಕೂಡ ಬಂಧಿಸಬೇಕು. ಈ ಸರ್ಕಾರದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲ. ಸದನದಲ್ಲಿ ವಿಷಯ ಪ್ರಸ್ತಾಪಿಸುತ್ತೇನೆ. ಮಚ್ಚು ತೆಗೆದುಕೊಂಡು ಓಡುವಡುವವರಿಗೆ ರಾಜ್ಯ ಸರ್ಕಾರದ ಬೆಂಬಲ ಇದೆ ಎಂದು ಟೀಕಿಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular