HomeLatest NewsBREAKING: ತುಮಕೂರಿನಲ್ಲಿ ಆತಂಕ ಸೃಷ್ಟಿಸಿದ ಅಪರಿಚಿತ ಶವದ ತುಂಡುಗಳು: ಐದು ಕಡೆ ಪತ್ತೆಯಾದ ಮೃತದೇಹದ ತುಂಡುಗಳು!

BREAKING: ತುಮಕೂರಿನಲ್ಲಿ ಆತಂಕ ಸೃಷ್ಟಿಸಿದ ಅಪರಿಚಿತ ಶವದ ತುಂಡುಗಳು: ಐದು ಕಡೆ ಪತ್ತೆಯಾದ ಮೃತದೇಹದ ತುಂಡುಗಳು!

ತುಮಕೂರು: ತುಮಕೂರಿನಲ್ಲಿ ಅಪರಿಚಿತ ಶವದ ತುಂಡುಗಳು ಪತ್ತೆಯಾಗಿದ್ದು, ಜಿಲ್ಲೆಯ ಜನರನ್ನು ಆತಂಕಕ್ಕೀಡುಮಾಡಿದೆ.

ತುಮಕೂರು ಜಿಲ್ಲೆಯ ಕೊರಟಗೆರೆ ಬಳಿ ರಸ್ತೆಯುದ್ದಕ್ಕೂ ಕವರ್ ನಲ್ಲಿ ಶವದ ತುಂಡುಗಳು ಪತ್ತೆಯಾಗಿದ್ದು, ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದೆ. ಕೊರಟಗೆರೆಯ ಕೋಳಾಲದ ಮುತ್ಯಾಲಮ್ಮ ದೇವಾಲಯದ ಬಳಿಯಿರುವ ರಸ್ತೆಯಲ್ಲಿ ಐದು ಕಡೆ ಮೃತದೇಹದ ತುಂಡುಗಳು ಪತ್ತೆಯಾಗಿವೆ.

3 ಕಿ.ಮೀ ಅಂತರದಲ್ಲಿ 5 ಕಡೆಗಳಲ್ಲಿ ಶವದ ತುಂಡುಗಳು ಪತ್ತೆಯಾಗಿದ್ದು, ಮೃತದೇಹದ ತುಂಡುಗಳು ಪುರುಷನದ್ದೋ? ಮಹಿಳೆಯದ್ದೋ ಎಂಬ ಗೊಂದಲವಿದೆ. ಘಟನಾ ಸ್ಥಳಕ್ಕೆ ತುಮಕೂರು ಎಸ್ ಪಿ ಕೆ.ವಿ.ಅಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular