HomeLatest NewsBREAKING: ಭಾರೀ ಮಳೆಯಾಗುತ್ತಿದ್ದ ವೇಳೆಯಲ್ಲೇ ಮನೆ ಬೀಗ ಮುರಿದು 1 ಕೆಜಿ 300 ಗ್ರಾಂ ಚಿನ್ನ,...

BREAKING: ಭಾರೀ ಮಳೆಯಾಗುತ್ತಿದ್ದ ವೇಳೆಯಲ್ಲೇ ಮನೆ ಬೀಗ ಮುರಿದು 1 ಕೆಜಿ 300 ಗ್ರಾಂ ಚಿನ್ನ, 1 ಲಕ್ಷ ರೂ. ನಗದು ಕಳವು

ಕೋಲಾರ: ಮನೆಯಲ್ಲಿದ್ದ ಒಂದು ಕೆಜಿ 300 ಗ್ರಾಂ ಚಿನ್ನಾಭರಣ, ಒಂದು ಲಕ್ಷ ರೂಪಾಯಿ ನಗದು ಕಳವು ಮಾಡಲಾಗಿದೆ.

ಕೋಲಾರ ಜಿಲ್ಲೆಯ ಬಂಗಾರಪೇಟೆ ಪಟ್ಟಣದ ವಿಜಯನಗರದಲ್ಲಿ ಘಟನೆ ನಡೆದಿದೆ. ವ್ಯಾಪಾರಿ ಸುನಿಲ್ ಕುಮಾರ್ ಎಂಬುವವರ ಮನೆಯ ಬೀಗ ಒಡೆದು ಕಳ್ಳರು ಕೃತ್ಯವೆಸಗಿದ್ದಾರೆ.

ನಿನ್ನೆ ಸುನಿಲ್ ಕುಮಾರ್ ಕುಟುಂಬದವರು ಬೆಂಗಳೂರಿಗೆ ಹೋಗಿದ್ದಾಗ ಕಳವು ಮಾಡಲಾಗಿದೆ. ಭಾರಿ ಮಳೆ ಆಗುತ್ತಿದ್ದ ವೇಳೆ ಮನೆಯ ಬೀಗ ಒಡೆದು ಕಳ್ಳರು ಕೃತ್ಯವೆಸಗಿದ್ದಾರೆ. ಮನೆಯ ಬಾಗಿಲು ಮುರಿದಿರುವ ಬಗ್ಗೆ ಅಕ್ಕಪಕ್ಕದವರು ಮಾಹಿತಿ ನೀಡಿದ್ದರು. ಬೆಂಗಳೂರಿನಿಂದ ವಾಪಸ್ ಬಂದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular