BIG NEWS: ದರ್ಶನ್ ಫ್ಯಾನ್ಸ್ ಗಳಿಂದ ನನ್ನ ಪರ್ಸನಲ್ ಲೈಫ್ ಡ್ಯಾಮೇಜ್ ಆಗಿದೆ: ಕ್ರಮ ಕೈಗೊಳ್ಳುವವರೆಗೂ ಧರಣಿ ನಿಲ್ಲಸಲ್ಲ ಎಂದ ನಟ ಪ್ರಥಮ್

ಬೆಂಗಳೂರು: ನಟ ದರ್ಶನ್ ಅಭಿಮಾನಿಗಳ ವಿರುದ್ಧ ಏಕಾಂಗಿಯಾಗಿ ಧರಣಿ ಕುಳಿತಿರುವ ನಟ ಪ್ರಥಮ್, ನಟ ದರ್ಶನ್ ಫ್ಯಾನ್ಸ್ ಗಳಿಂದ ನನ್ನ ಪರ್ಸನಲ್ ಲೈಫ್ ಡ್ಯಾಮೇಜ್ ಆಗಿದೆ. ತಕ್ಷಣ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರನ್ನು ಒತ್ತಾಯಿಸಿದ್ದಾರೆ.

ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿರುವ ನಟ ಪ್ರಥಮ್ ದರ್ಶನ್ ಫ್ಯಾನ್ಸ್ ಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು. ಅಲ್ಲಿಯವರೆಗೂ ಉಪವಾಸ ಸತ್ಯಾಗ್ರಹ ನಿಲ್ಲಿಸಲ್ಲ ಎಂದರು.

ದರ್ಶನ್ ಅಭಿಮಾನಿಗಳ ಹೆಸರಲ್ಲಿ ಖಾತೆ ತೆರೆದು ಸಾಮಾಜಿಕ ಜಾಲತಾಣಗಳಲ್ಲಿ ನನ್ನ ತೇಜೋವಧೆ ಮಾಡಲಾಗಿದೆ. ಇದರಿಂದ ನನ್ನ ಪರ್ಸನಲ್ ಇಮೇಜ್ ಹಾಳಾಗಿದೆ. ದರ್ಶನ್ ಅವರ ಅಧಿಕೃತ ಫ್ಯಾನ್ ಪೇಜ್ ಗಳಾದ ಡಿ ಡೈನಾಸ್ಟಿ, ಡಿ ಕಿಂಗ್ ಡಮ್, ಡಿ ಯೂನಿವರ್ಸ್ ಮತ್ತು ಡೆವಿಲ್ ಕಿಂಗ್ ಡಮ್ ಜೊತೆ 500ಕ್ಕೂ ಹೆಚ್ಚು ಪೇಜ್ ಗಳಿಮ್ದ ನನ್ನ ವೈಯಕ್ತಿಕ ತೇಜೋವಧೆಗಳಿದಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ತಕ್ಷಣ ಈ ಎಲ್ಲಾ ಪೇಜ್ ಗಳನ್ನು ಡಿಲಿಟ್ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read