HomeLatest Newsಆಸ್ತಿ ಖರೀದಿ, ಮಾರಾಟಗಾರರೇ ಗಮನಿಸಿ: ಇನ್ನು ಆಸ್ತಿ ನೋಂದಣಿಗೆ ಜಿಪಿಎ ಕಡ್ಡಾಯ: ಮಸೂದೆಗೆ ರಾಷ್ಟ್ರಪತಿ ಅಂಕಿತ

ಆಸ್ತಿ ಖರೀದಿ, ಮಾರಾಟಗಾರರೇ ಗಮನಿಸಿ: ಇನ್ನು ಆಸ್ತಿ ನೋಂದಣಿಗೆ ಜಿಪಿಎ ಕಡ್ಡಾಯ: ಮಸೂದೆಗೆ ರಾಷ್ಟ್ರಪತಿ ಅಂಕಿತ

ಬೆಂಗಳೂರು: ಇನ್ನು ಮುಂದೆ ಆಸ್ತಿ ನೋಂದಣಿಗೆ ಜನರಲ್ ಪವರ್ ಆಟಾರ್ನಿ(ಜಿಪಿಎ) ಕಡ್ಡಾಯಗೊಳಿಸುವ ನೋಂದಣಿ ಕರ್ನಾಟಕ(ತಿದ್ದುಪಡಿ) ಅಧಿನಿಯಮ 2025 ಕ್ಕೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ.

ಈ ಸಂಬಂಧ ರಾಜ್ಯ ಸರ್ಕಾರ ಸೋಮವಾರ ಅಧಿಕೃತ ರಾಜ್ಯ ಪತ್ರ ಹೊರಡಿಸಿದ್ದು, ರಾಜ್ಯ ಪತ್ರ ಹೊರಡಿಸಿದ ದಿನದಿಂದಲೇ ಈ ಮಸೂದೆ ಜಾರಿಗೆ ಬರಲಿದೆ ಎಂದು ತಿಳಿಸಿದೆ.

ನೋಂದಣಿ ಅಧಿನಿಯಮ 19008(1908ರ ಕೇಂದ್ರ ಅಧಿನಿಯಮ 16) ಅನ್ನು ಮತ್ತಷ್ಟು ತಿದ್ದುಪಡಿ ಮಾಡಿ ಕೆಲವು ಬದಲಾವಣೆ ಒಳಗೊಂಡ ಮಸೂದೆ ಇದಾಗಿದೆ. ಆಸ್ತಿ ನೋಂದಣಿಯನ್ನು ಸಂಪೂರ್ಣ ಡಿಜಟಲೀಕರಿಸುವ, ಪಾರದರ್ಶಕತೆ ಹೆಚ್ಚಿಸುವ ಬಗ್ಗೆ ಈ ತಿದ್ದುಪಡಿ ತರಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನು ಮುಂದೆ ಆಸ್ತಿ ವರ್ಗಾವಣೆಗೆ ಮೊದಲು ನಡೆಸುವ ಜಿಪಿಎ ಕೂಡ ಕಡ್ಡಾಯವಾಗಿ ನೋಂದಣಿ ಮಾಡಬೇಕು. ಆಸ್ತಿ ವರ್ಗಾವಣೆ ಸಮಯದಲ್ಲಿ ಪವರ್ ಆಫ್ ಅಟಾರ್ನಿ ಬರೆದು ಕೊಡುವವರು ಬದುಕಿರುವುದನ್ನು ಖಚಿತಪಡಿಸಲು ಸೂಕ್ತ ಪುರಾವೆ ಹಾಜರುಪಡಿಸಬೇಕು. ಇದು ಅಕ್ರಮ ಆಸ್ತಿ ವರ್ಗಾವಣೆ, ನೋಂದಣಿ, ಭೂಕಬಳಿಗೆ ಮತ್ತು ಒತ್ತುವರಿ ಪ್ರಕರಣಗಳನ್ನು ತಪ್ಪಿಸಲಿದೆ ಎಂದು ಹೇಳಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular