ಅಡಿಲೇಡ್(ಆಸ್ಟ್ರೇಲಿಯಾ): ಆಸ್ಟ್ರೇಲಿಯಾದಲ್ಲಿ ಭಾರತೀಯ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಲಾಗಿದೆ. ಭಾರತೀಯ ವಿದ್ಯಾರ್ಥಿ ಚರಣ್ ಪ್ರೀತ್ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.
ಆಡಿಲೆಟ್ ನಗರದಲ್ಲಿ ಕಾರ್ ಪಾರ್ಕಿಂಗ್ ವಿಚಾರವಾಗಿ ಜನಾಂಗೀಯ ನಿಂದನೆ ಮಾಡಿ ಗುಂಪು ಹಲ್ಲೆ ನಡೆಸಲಾಗಿದೆ. ಮುಖಕ್ಕೆ ಗುದ್ದಿ ಮಾರಕಾಸ್ತ್ರಗಳಿಂದ ಚರಣ್ ಮೇಲೆ ಹಲ್ಲೆ ನಡೆಸಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚರಣ್ ಗೆ ಚಿಕಿತ್ಸೆ ನೀಡಲಾಗಿದೆ.
ಸೆಂಟ್ರಲ್ ಅಡಿಲೇಡ್‌ನಲ್ಲಿ ನಡೆದ ಕ್ರೂರ ಮತ್ತು ಜನಾಂಗೀಯ ಪ್ರೇರಿತ ದಾಳಿಯ ನಂತರ ಭಾರತೀಯ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ, ಇದು ವ್ಯಾಪಕ ಖಂಡನೆಗೆ ಕಾರಣವಾಗಿದೆ.
ಜುಲೈ 19 ರಂದು ಶನಿವಾರ (ಸ್ಥಳೀಯ ಸಮಯ) ರಾತ್ರಿ 9:22 ರ ಸುಮಾರಿಗೆ 23 ವರ್ಷದ ಚರಣ್‌ಪ್ರೀತ್ ಸಿಂಗ್, ಕಿಂಟೋರ್ ಅವೆನ್ಯೂ ಬಳಿ ತನ್ನ ಪತ್ನಿಯೊಂದಿಗೆ ಇದ್ದಾಗ ಐದು ಜನರ ಗುಂಪು ಹೊಂಚು ಹಾಕಿ ಅವರ ಮೇಲೆ ಹಲ್ಲೆ ನಡೆಸಿದೆ. ಜನಾಂಗೀಯ ನಿಂದನೆ ಮಾಡಿದೆ. ಸಣ್ಣ ಪಾರ್ಕಿಂಗ್ ವಿಚಾರವಾಗಿ ಗಲಾಟೆ ಪ್ರಾರಂಭವಾದದ್ದು ಜನಾಂಗೀಯವಾಗಿ ದಾಳಿಗೆ ಕಾರಣವಾಯಿತು ಎಂದು ಸಿಂಗ್ ಹೇಳಿದ್ದಾರೆ.
ಹಲ್ಲೆಯಿಂದ ಸಿಂಗ್ ರಸ್ತೆಯಲ್ಲೇ ಪ್ರಜ್ಞಾಹೀನರಾದರು. ಅವರು ಗಂಭೀರ ಗಾಯಗೊಂಡಿದ್ದು, ರಾಯಲ್ ಅಡಿಲೇಡ್ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ.

