BREAKING : ಹೃದಯಾಘಾತದಿಂದ ಬಾಲಿವುಡ್ ಹಿರಿಯ ನಟ, ನಿರ್ಮಾಪಕ ಧೀರಜ್ ಕುಮಾರ್ ನಿಧನ |Dheeraj Kumar Passed Away

ಹೃದಯಾಘಾತದಿಂದ ಬಾಲಿವುಡ್ ಖ್ಯಾತ ನಟ, ನಿರ್ದೇಶಕ ಮತ್ತು ನಿರ್ಮಾಪಕ ಧೀರಜ್ ಕುಮಾರ್ (79) ನಿಧನರಾದರು.

ನ್ಯುಮೋನಿಯಾದಿಂದ ಬಳಲುತ್ತಿದ್ದ ಅವರನ್ನು ಶನಿವಾರ ಸಂಜೆ ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳವಾರ ಬೆಳಿಗ್ಗೆ 11:40 ಕ್ಕೆ ಅವರು ಕೊನೆಯುಸಿರೆಳೆದರು ಎಂದು ವರದಿಯಾಗಿದೆ.

ಹೃದಯಾಘಾತದಿಂದ ನಮ್ಮನ್ನು ಅಗಲಿದ ಖ್ಯಾತ ನಟ, ನಿರ್ಮಾಪಕ ಮತ್ತು ನಿರ್ದೇಶಕ ಧೀರಜ್ ಕುಮಾರ್ ಅವರ ನಿಧನವನ್ನು ನಾವು ಅತ್ಯಂತ ದುಃಖದಿಂದ ಘೋಷಿಸುತ್ತಿದ್ದೇವೆ. ಅವರು ಅಂಧೇರಿ ಪಶ್ಚಿಮದ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಮತ್ತು ವೆಂಟಿಲೇಟರ್ ಬೆಂಬಲದಲ್ಲಿದ್ದರು. ಅವರ ಸ್ಥಿತಿ ಗಂಭೀರವಾದ ನಂತರ, ಅವರನ್ನು ತೀವ್ರ ನಿಗಾ ಘಟಕಕ್ಕೆ (ಐಸಿಯು) ಸ್ಥಳಾಂತರಿಸಲಾಯಿತು, ಅಲ್ಲಿ ಅವರು ಕೊನೆಯುಸಿರೆಳೆದರು. ಅವರ ಶೀಘ್ರ ಚೇತರಿಕೆಗಾಗಿ ಪ್ರಾರ್ಥಿಸುವಂತೆ ಕುಟುಂಬವು ಅವರ ನಿರ್ಮಾಣ ತಂಡದೊಂದಿಗೆ ಹೇಳಿಕೆಯನ್ನು ಬಿಡುಗಡೆ ಮಾಡಿತ್ತು.

ಧೀರಜ್ ಕೊಚಾರ್ ಅವರನ್ನು ಧೀರಜ್ ಕುಮಾರ್ ಎಂದು ಕರೆಯಲಾಗುತ್ತಿತ್ತು. 1 ಅಕ್ಟೋಬರ್ 1944 ರಂದು ಅವರು ಜನಿಸಿದರು. ಭಾರತೀಯ ನಟ, ನಿರ್ಮಾಪಕ ಮತ್ತು ನಿರ್ದೇಶಕರಾಗಿ ಕೂಡ ಅವರು ಕೆಲಸ ಮಾಡಿದ್ದಾರೆ.
1986 ರಲ್ಲಿ ಕ್ರಿಯೇಟಿವ್ ಐ ಲಿಮಿಟೆಡ್ ಎಂಬ ದೂರದರ್ಶನ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಿದರು . ಅವರು ಸರ್ಗಮ್ (1979), ರೋಟಿ ಕಪಡಾ ಔರ್ ಮಕಾನ್ (1974) ಮತ್ತು ಬೆಹರೂಪಿಯಾ (1971) ಸೇರಿದಂತೆ ಬಾಲಿವುಡ್ ಮತ್ತು ಪಂಜಾಬಿ ಎರಡೂ ಚಲನಚಿತ್ರಗಳಲ್ಲಿ ನಟಿಸಿದ್ದಾರೆ .

ಧೀರಜ್ ಕುಮಾರ್ ಚಿತ್ರಗಳು
• ದೀದಾರ್ (1970)
• ರಾತೋ ಕಾ ರಾಜಾ (1971)
• ಬಹರೋನ್ ಫೂಲ್ ಬರ್ಸಾವೊ (1972)
• ಬಿಜಲಿ (1972)
• ಹೀರಾ ಪನ್ನಾ (1973)
• ಶರಫತ್ ಚೋಡ್ ದಿ ಮೈನೆ (1973)
• ರೋಟಿ ಕಪ್ಡಾ ಔರ್ ಮಕಾನ್ (1975)
• ರಂಗ ಖುಷ್ (1975)
• ಅಂಗಾರೆ (1976)
• ದಾಜ್ (1976)
• ಫೌಜಿ (1976) (ಪಂಜಾಬಿ ಚಲನಚಿತ್ರ)
• ಉಧರ್ ಕಾ ಸಿಂಧೂರ್ (1976)

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read