HomeLive NewsBREAKING: ಗುತ್ತಿಗೆದಾರನಿಂದ ಲಂಚ ಪಡೆಯುತ್ತಿದ್ದಾಗ ಜಿಲ್ಲಾಸ್ಪತ್ರೆ ಸರ್ಜನ್ ಲೋಕಾಯುಕ್ತ ಬಲೆಗೆ

BREAKING: ಗುತ್ತಿಗೆದಾರನಿಂದ ಲಂಚ ಪಡೆಯುತ್ತಿದ್ದಾಗ ಜಿಲ್ಲಾಸ್ಪತ್ರೆ ಸರ್ಜನ್ ಲೋಕಾಯುಕ್ತ ಬಲೆಗೆ

ಕಾರವಾರ: ಗುತ್ತಿಗೆದಾರರನಿಂದ ಲಂಚ ಪಡೆಯುತ್ತುದ್ದಾಗಲೇ ಜಿಲ್ಲಾಸ್ಪತ್ರೆ ಸರ್ಜನ್ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

ಡಾ.ಶಿವಾನಂದ ಕಡ್ತಲಕರ ಲೋಕಾಯುಕ್ತ ಬಲೆಗೆ ಬಿದ್ದ ಉತ್ತರ ಕನ್ನಡ ಜಿಲ್ಲಾಸ್ಪತ್ರೆಯ ಸರ್ಜನ್. ಮೌಸಿಮ್ ಅಹ್ಮದ್ ಶೇಖ್ ಎಂಬ ಗುತ್ತಿಗೆದಾರನ ಬಳಿ ಲಂಚಕ್ಕೆ ಕೈಯೊಡ್ಡಿದಾಗಲೇ ಲೋಕಾಯುಕ್ತ ದಾಳಿ ನಡೆದಿದೆ.

8 ತಿಂಗಳ ಹಿಂದೆ ಗುತ್ತಿಗೆದಾರ ಮೌಸಿಮ್ 3.5 ಲಕ್ಷ ರೂಪಾಯಿಗೆ ರೋಗಿಗಳ ಹಾಸಿಗೆ ಟೆಂಡರ್ ಪಡೆದಿದ್ದರು. 3.5 ಲಕ್ಷ ಹಣ ಬಿಡುಗಡೆಗೆ ಸರ್ಜನ್ 75 ಸಾವಿರ ರೂಪಾಯಿ ಕಮಿಷನ್ ಕೇಳಿದ್ದಾರೆ. ಈ ಪೈಕಿ ನಿನ್ನೆ 20 ಸಾವಿರ ರೂಪಾಯಿ ಲಂಚದ ಹಣವನ್ನು ಡಾ. ಶಿವಾನಂದ್ ಪಡೆದಿದ್ದರು. ಇಂದು 30 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜಿಲ್ಲಾಸ್ಪತ್ರೆಯಲ್ಲಿ ಲಂಚದ ಹಣ ಪಡೆಯುತ್ತಿದ್ದಾಗಲೇ ಲೋಕಾಯುಕ್ತ ಡಿವ್ಯ ಎಸ್ ಪಿ ದಿವ್ಯಾ ನಾಯ್ಕ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಡಾ.ಶಿವಾನಂದ್ ಅವರನ್ನು ವಶಕ್ಕೆ ಪಡೆಯಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular