ತಮಿಳಿನ ಯೂಟ್ಯೂಬರ್ ಓರ್ವ ‘ಸಾಹಸ ಸಿಂಹ’, ನಟ ವಿಷ್ಣುವರ್ಧನ್ ನಟನೆಯನ್ನು ಹೀಯಾಳಿಸಿದ್ದು, ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.ಸೋಶಿಯಲ್ ಮೀಡಿಯಾದಲ್ಲಿ ಇನ್ನೊಬ್ಬರನ್ನು ಹೀಯಾಳಿಸಿ, ನಿಂದಿಸಿ ವೀವ್ಸ್ ಪಡೆದುಕೊಳ್ಳುವ ಕೆಟ್ಟ ಪ್ರವೃತ್ತಿ ಬೆಳೆಯುತ್ತಿದೆ. ಅದೇ ತೆರನಾಗಿ ಈ ತಮಿಳಿನ ಯುಟ್ಯೂಬರ್ ನಟ ವಿಷ್ಣುವರ್ಧನ್ ಬಗ್ಗೆ ಕೆಟ್ಟದಾಗಿ ಮಾತನಾಡಿ ಕನ್ನಡಿಗರನ್ನು ಕೆಣಕಿದ್ದಾನೆ.
ಹೌದು, ಕೋಟಿಗೊಬ್ಬ ಚಿತ್ರದಲ್ಲಿ ನಟ ವಿಷ್ಣುವರ್ಧನ್ ಅಭಿನಯವನ್ನು ಈತ ಹೀಯಾಳಿಸಿದ್ದು, ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾನೆ. ಸೋಶಿಯಲ್ ಮೀಡಿಯಾದಲ್ಲಿ ಈತನನ್ನು ಕನ್ನಡಿಗರು ಹಿಗ್ಗಾಮುಗ್ಗಾ ಜಾಡಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಇನ್ನೊಬ್ಬರನ್ನು ಹೀಯಾಳಿಸಿ, ನಿಂದಿಸಿ ವೀವ್ಸ್ ಪಡೆದುಕೊಳ್ಳುವ ಕೆಟ್ಟ ಪ್ರವೃತ್ತಿ ಬೆಳೆಯುತ್ತಿದೆ. ಅದೇ ತೆರನಾಗಿ ಈ ತಮಿಳಿನ ಯುಟ್ಯೂಬರ್ ನಟ ವಿಷ್ಣುವರ್ಧನ್ ಬಗ್ಗೆ ಕೆಟ್ಟದಾಗಿ ಮಾತನಾಡಿ ಕನ್ನಡಿಗರನ್ನು ಕೆಣಕಿದ್ದಾನೆ.
ಈ ಸಿನಿಮಾದಲ್ಲಿ ಕಾಲಿನಿಂದ ವಿಲನ್ ನ್ನು ಹಗ್ಗದಿಂದ ಕಟ್ಟಿ ಹಾಕುವ ದೃಶ್ಯ ಮತ್ತು ಸಿಂಹ ವಿಷ್ಣು ರೂಪ ಪಡೆಯುವ ಗ್ರಾಫಿಕ್ಸ್ ನ್ನು ಟೀಕಿಸಿದ್ದಾನೆ. ಸದ್ಯ ವಿಡಿಯೋ ವೈರಲ್ ಆಗಿದೆ. ಟೂಬ್ ಲೈಟ್ ಮೈಂಡ್ ಟಾಮ್ ವಿಜಯ ಹೆಸರಿನ ಯೂಟ್ಯೂಬ್ ಚಾನೆಲ್ ನಲ್ಲಿ ಈ ವಿಡಿಯೋ ಅಪ್ ಲೋಡ್ ಆಗಿದೆ. ಕೋಟಿಗೊಬ್ಬ ಸಿನಿಮಾ ರಜನಿಕಾಂತ್ ನಟನೆಯ ಭಾಷಾ ಸಿನಿಮಾದ ರಿಮೇಕ್ ಆಗಿದೆ. ಈ ಸಿನಿಮಾದಲ್ಲಿ ಅವರು ಶೇಡ್ ನಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಅಂದು ಸೂಪರ್ ಹಿಟ್ ಆಗಿತ್ತು.