HomeLatest NewsSHOCKING : '18 ಎಕರೆ ಆಸ್ತಿ' ಇದ್ರೂ ಕನ್ಯೆ ಸಿಕ್ಕಿಲ್ಲ ಎಂಬ ವೀಡಿಯೋ ವೈರಲ್ :...

SHOCKING : ’18 ಎಕರೆ ಆಸ್ತಿ’ ಇದ್ರೂ ಕನ್ಯೆ ಸಿಕ್ಕಿಲ್ಲ ಎಂಬ ವೀಡಿಯೋ ವೈರಲ್ : ಮದುವೆಯಾಗಿ ಪತಿಯನ್ನೇ ಹತ್ಯೆಗೈದ ಪತ್ನಿ.!

ಲಕ್ನೋ : ಮಹಿಳೆಯೊಬ್ಬರು ಆಸ್ತಿಗಾಗಿ ವ್ಯಕ್ತಿಯೋರ್ವನನ್ನ ಮದುವೆ ಆಗಿ , ಕೆಲವೇ ದಿನಗಳಲ್ಲಿ ಆತನನ್ನು ಕೊಲೆ ಮಾಡಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಕೊಲೆಯಾದ ವ್ಯಕ್ತಿಯನ್ನು ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯ ಪಡ್ವಾರ್ ಗ್ರಾಮದ ಇಂದ್ರಕುಮಾರ್ ತಿವಾರಿ (45) ಎಂದು ಗುರುತಿಸಲಾಗಿದೆ. ಸಾಹಿಬಾ ಬಾನೋ ಎಂಬ ಮಹಿಳೆ ಕೊಲೆ ಮಾಡಿದ ಆರೋಪಿ.

ಏನಿದು ಘಟನೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಂದ್ರಕುಮಾರ್ ತಿವಾರಿ ಶಿಕ್ಷಕ ಮತ್ತು ರೈತನಾಗಿದ್ದರು. ಕಳೆದ ತಿಂಗಳು ಪ್ರಸಿದ್ಧ ಗುರು ಅನಿರುದ್ಧಾಚಾರ್ಯ ಮಹಾರಾಜ್ ಅವರ ಆಧ್ಯಾತ್ಮಿಕ ಪ್ರವಚನದ ಸಂದರ್ಭದಲ್ಲಿ, ’18 ಎಕರೆ ಭೂಮಿ ಹೊಂದಿದ್ದೇನೆ. ಆದರೆ ತನ್ನ ಆಸ್ತಿಯನ್ನು ನೋಡಿಕೊಳ್ಳಲು ಯಾರೂ ಇಲ್ಲ. ಮದುವೆಯಾಗಲು ಕನ್ಯೆ ಸಿಗುತ್ತಿಲ್ಲ’ ಎಂದು ಹತಾಶೆ ವ್ಯಕ್ತಪಡಿಸಿದ್ದರು. ಈ ವಿಡಿಯೋ ವೈರಲ್ ಆಗಿತ್ತು. ಇದನ್ನು ಗಮನಿಸಿದ ವಂಚಕಿ ಸಾಹಿಬಾ ಬಾನೋ ಆತನನ್ನು ಮದುವೆಯಾಗಿದ್ದಾಳೆ.

ಸಾಹಿಬಾ ಬಾನೋ ನಕಲಿ ಆಧಾರ್ ಕಾರ್ಡ್ ಮಾಡಿಸಿ ಖುಷಿ ತಿವಾರಿ ಎಂದು ಹೆಸರು ಬದಲಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಇಂದ್ರಕುಮಾರ್ರನ್ನು ಸಂಪರ್ಕಿಸಿದ್ದಳು. ನಂತರ ಅವರನ್ನು ಉತ್ತರ ಪ್ರದೇಶದ ಗೋಖ್ ಪುರಕ್ಕೆ ಕರೆಸಿ, ಮದುವೆಯಾಗಿದ್ದಳು. ಕೆಲವು ದಿನಗಳ ನಂತರ ಇಂದ್ರಕುಮಾರ್ ಶವ ಉತ್ತರ ಪ್ರದೇಶದ ಕುಶಿನಗರದ ಹತಾ ಕೊತ್ವಾಲಿ ಪ್ರದೇಶದ ಸುಕಲಿಯಲ್ಲಿ ಪತ್ತೆಯಾಗಿತ್ತು. ನಂತರ ಪೊಲೀಸರು ತನಿಖೆ ನಡೆಸಿದಾಗ ಸಾಹಿಬಾಳೇ ಆತನನ್ನು ಕೊಂದಿದ್ದಾಳೆ ಎಂದು ಗೊತ್ತಾಗಿದ್ದು, ಸದ್ಯ ಆಕೆಯನ್ನು ಬಂಧಿಸಲಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular