HomeLatest Newsರೈತರಿಗೆ ಭರ್ಜರಿ ಗುಡ್ ನ್ಯೂಸ್: 68 ದಿನಗಳಲ್ಲೇ ಕೊಯ್ಲಿಗೆ ಬರುವ, ವರ್ಷಕ್ಕೆ 5 ಬೆಳೆ ಬೆಳೆಯುವ...

ರೈತರಿಗೆ ಭರ್ಜರಿ ಗುಡ್ ನ್ಯೂಸ್: 68 ದಿನಗಳಲ್ಲೇ ಕೊಯ್ಲಿಗೆ ಬರುವ, ವರ್ಷಕ್ಕೆ 5 ಬೆಳೆ ಬೆಳೆಯುವ ರಾಗಿ ತಳಿ ಅಭಿವೃದ್ಧಿಪಡಿಸಿದ ವಿಜ್ಞಾನಿಗಳು | Rapid Ragi

ಇಕ್ರಿಸಾಟ್(ICRISAT -International Crops Research Institute for the Semi-Arid Tropics)  ರಾಗಿಯ ಬಗ್ಗೆ ಸಂಶೋಧನೆ ನಡೆಸಿ ರಾಪಿಡ್ ರಾಗಿ(Rapid Ragi) ಎನ್ನುವ ಹೊಸ ತಳಿಯನ್ನು ಅಭಿವೃದ್ಧಿಪಡಿಸಿದೆ.

ಸ್ಫೀಡ್ ಬ್ರೀಡಿಂಗ್ ವಿಧಾನದ ಮೂಲಕ ವಿಜ್ಞಾನಿಗಳು ಹೊಸ ತಳಿಯನ್ನು ಸೃಷ್ಟಿಸಿದ್ದಾರೆ. ಸಾಂಪ್ರದಾಯಿಕ ರಾಗಿಗಿಂತಲೂ ಉತ್ತಮ ದರ್ಜೆಯ ರಾಗಿ ತಳಿಯನ್ನು ಇಕ್ರಿಸಾಟ್ ಬಿಡುಗಡೆ ಮಾಡಿದೆ.

ಪ್ರಮುಖ ಸಿರಿಧಾನ್ಯ ಬೆಳೆಯಾಗಿ ಗುರುತಿಸಲ್ಪಟ್ಟಿರುವ ರಾಗಿ ಕೊಯ್ಲಿಗೆ ಬರಲು ಸಾಮಾನ್ಯವಾಗಿ 135 ದಿನ ಬೇಕಾಗುತ್ತದೆ. ವಾರ್ಷಿಕ ಎರಡು ಬೆಳೆ ಬೆಳೆಯಲು ಮಾತ್ರ ಸಾಧ್ಯವಾಗುತ್ತದೆ. ಆದರೆ ಇಕ್ರಿಸಾಟ್ ಅಭಿವೃದ್ಧಿಪಡಿಸಿದ ರ್ಯಾಪಿಡ್ ರಾಗಿ 68 ದಿನಗಳಲ್ಲಿ ಕೊಯ್ಲಿಗೆ ಬರುತ್ತದೆ. ವರ್ಷದಲ್ಲಿ ಐದು ಬೆಳೆ ಬೆಳೆಯಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೀಜ ಬಿತ್ತನೆಯ ನಂತರ ವೇಗವಾಗಿ ಮೊಳಕೆಯೊಡೆಯುತ್ತದೆ. ಹೆಚ್ಚಿನ ಬೆಳಕು, ಉಷ್ಣಾಂಶ ತೇವಾಂಶವನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದು, ಕಡಿಮೆ ನೀರಿನಿಂದಲೂ ಇದನ್ನು ಬೆಳೆಯಬಹುದಾಗಿದೆ. ಪ್ರಸ್ತುತ ರಾಗಿ ತಳಿಯಿಂದ ಪಡೆಯುವ ಇಳುವರಿಗಿಂತಲೂ ರ್ಯಾಪಿಡ್ ರಾಗಿಯಿಂದ ಹೆಚ್ಚಿನ ಇಳುವರಿ ಸಿಗುತ್ತದೆ ಎಂದು ಹೇಳಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular