HomeLatest Newsಪತ್ನಿ ಹೆಸರಲ್ಲಿ ಮಳಿಗೆ ಪಡೆದ ಬೆಳಗಾವಿ ಮೇಯರ್ ಸೇರಿ ಇಬ್ಬರ ಸದಸ್ಯತ್ವ ರದ್ದು: ನಗರಾಭಿವೃದ್ಧಿ ಇಲಾಖೆ...

ಪತ್ನಿ ಹೆಸರಲ್ಲಿ ಮಳಿಗೆ ಪಡೆದ ಬೆಳಗಾವಿ ಮೇಯರ್ ಸೇರಿ ಇಬ್ಬರ ಸದಸ್ಯತ್ವ ರದ್ದು: ನಗರಾಭಿವೃದ್ಧಿ ಇಲಾಖೆ ಆದೇಶ

ಬೆಳಗಾವಿ: ತಮ್ಮ ಪತ್ನಿಯ ಹೆಸರಲ್ಲಿ ಮಳಿಗೆ ಪಡೆದ ವಿವಾದಕ್ಕೆ ಸಂಬಂಧಿಸಿದಂತೆ ಬೆಳಗಾವಿಯ ಹಾಲಿ ಮೇಯರ್ ಮಂಗೇಶ್ ಪವಾರ್ ಮತ್ತು ಪಾಲಿಕೆ ಸದಸ್ಯ ಜಯಂತ್ ಜಾಧವ್ ಅವರ ಸದಸ್ಯತ್ವ ರದ್ದುಗೊಳಿಸಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.

ಮೇಯರ್ ಮಂಗೇಶ್ ಪವಾರ್ ಮತ್ತು ಪಾಲಿಕೆ ಸದಸ್ಯ ಜಯಂತ್ ಜಾಧವ್ ಅವರು ತಮ್ಮ ಪತ್ನಿಯರ ಹೆಸರಲ್ಲಿ ಮಳಿಗೆ ಪಡೆದಿದ್ದು, ಪಾಲಿಕೆ ಸದಸ್ಯರಾಗಿ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಸುಜಿತ್ ಮುಳಗುಂದ ಈ ಹಿಂದೆ ಪ್ರಾದೇಶಿಕ ಆಯುಕ್ತರಿಗೆ ದೂರು ಸಲ್ಲಿಸಿದ್ದರು. ಆಯುಕ್ತರು ಇಬ್ಬರು ಸದಸ್ಯತ್ವವನ್ನು ರದ್ದು ಮಾಡಿದ್ದರು. ಆದರೆ, ಅವರು ಹೈಕೋರ್ಟ್ ಮೆಟ್ಟಿಲೇರಿ ತಡೆಯಾಜ್ಞೆ ತಂದಿದ್ದರು. ಈ ನಡುವೆ ಮಂಗೇಶ್ ಮೇಯರ್ ಕೂಡ ಆಗಿದ್ದಾರೆ. ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಅಂತೆಯೇ ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ವಿಚಾರಣೆ ನಡೆಸಿ ಈ ಇಬ್ಬರ ಸದಸ್ಯತ್ವ ರದ್ದು ಮಾಡಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular