ಡಿಜಿಟಲ್ ಡೆಸ್ಕ್ : ಸ್ಕೂಟಿಗೆ ಟಿಪ್ಪರ್ ಡಿಕ್ಕಿಯಾಗಿ ಚಕ್ರದಡಿ ಸಿಲುಕಿ 6 ವರ್ಷದ ಬಾಲಕ ಸಿಲುಕಿ ಮೃತಪಟ್ಟಿದ್ದು, ತಾಯಿ ಎದುರೇ ಮಗ ಪ್ರಾಣಬಿಟ್ಟಿದ್ದಾನೆ.
ಶುಕ್ರವಾರ ಹೈದರಾಬಾದ್ನ ದುಂಡಿಗಲ್ನಲ್ಲಿ ಟಿಪ್ಪರ್ ಹರಿದು ಶಾಲಾ ಬಾಲಕನೊಬ್ಬ ಸಾವನ್ನಪ್ಪಿದ್ದಾನೆ. ವಾಹನದಡಿಯಲ್ಲಿ ಸಿಲುಕಿ ಮಗು ಸಾವನ್ನಪ್ಪಿದೆ.
1ನೇ ತರಗತಿಯ ವಿದ್ಯಾರ್ಥಿಯಾಗಿರುವ ಬಾಲಕ ಮಲ್ಲಂಪೇಟ್ ಪ್ರದೇಶದಲ್ಲಿರುವ ಪಲ್ಲವ್ ಇಂಟರ್ನ್ಯಾಷನಲ್ ಶಾಲೆಗೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದರಿಂದ ಸ್ವಲ್ಪ ಹೊತ್ತು ಟ್ರಾಫಿಕ್ ಜಾಮ್ ಉಂಟಾಗಿತ್ತು.
ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ವೀಡಿಯೊದಲ್ಲಿ ಮಹಿಳೆಯೊಬ್ಬರು ಮಗುವಿನ ಜೊತೆ ಸ್ಕೂಟರ್ನಲ್ಲಿ ಚಲಿಸುತ್ತಿರುವುದನ್ನು ತೋರಿಸಲಾಗಿದ್ದು, ಟಿಪ್ಪರ್ ಹಿಂದಿನಿಂದ ಅವರಿಗೆ ಡಿಕ್ಕಿ ಹೊಡೆದು ಹುಡುಗನ ಮೇಲೆ ಹರಿದಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.