HomeLatest NewsJOB ALERT : ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ

JOB ALERT : ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ

ಮಡಿಕೇರಿ : ಪ್ರಸಕ್ತ (2025-26) ಸಾಲಿಗೆ ಡಾ.ಎ.ಪಿ.ಜೆ ಅಜ್ದುಲ್ ಕಲಾಂ ವಸತಿ ಶಾಲೆ/ ಕಾಲೇಜು, ಕ್ಯಾತೆ ಗ್ರಾಮ ಕೊಡ್ಲಿಪೇಟೆ, ಸೋಮವಾರಪೇಟೆ ತಾಲ್ಲೂಕು, ಕೊಡಗು ಜಿಲ್ಲೆ ಇಲ್ಲಿನ ಶಾಲಾ ವಿಭಾಗಕ್ಕೆ ಹಾಗೂ ಕಾಲೇಜು ವಿಭಾಗಕ್ಕೆ ಅತಿಥಿ ಶಿಕ್ಷಕರು ಹಾಗೂ ಅತಿಥಿ ಉಪನ್ಯಾಸಕರ ಸೇವೆಯನ್ನು ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಜುಲೈ, 02 ಕೊನೆಯ ದಿನವಾಗಿದೆ. ವಸತಿ ಹಾಗೂ ಊಟದ ಸೌಲಭ್ಯ ಒದಗಿಸಲಾಗುವುದು. ಶಾಲಾ ವಿಭಾಗ (ವೇತನ ಶ್ರೇಣೆ ರೂ 16,650, ಕಂಪ್ಯೂಟರ್ ಶಿಕ್ಷಕರು. ವಿದ್ಯಾರ್ಹತೆ ಬಿ.ಸಿ.ಎ, 01 ಹುದ್ದೆ, ಕಾಲೇಜು ವಿಭಾಗ (ವೇತನ ಶ್ರೇಣೆ – ರೂ 18.150). ಭೌತಶಾಸ್ತ್ರ (01 ಹುದ್ದೆ) ಮತ್ತು ರಸಾಯನಶಾಸ್ತ್ರ ಉಪನ್ಯಾಸಕರು(01 ಹುದ್ದೆ) ವಿದ್ಯಾರ್ಹತೆ ಎಂಎಸ್‍ಸಿ ಅಥವಾ ಬಿ.ಎಡ್ ಆಗಿರಬೇಕು.

ಹೆಚ್ಚಿನ ಮಾಹಿತಿಗೆ ಜಿಲ್ಲಾ ಕಚೇರಿ ಅಲ್ಪಸಂಖ್ಯಾಂತರ ಕಲ್ಯಾಣ ಮೌಲಾನಾ ಆಜಾದ್ ಭವನ, ಎಫ್‍ಎಂಸಿ. ಕಾಲೇಜು ಹತ್ತಿರ, ಮಡಿಕೇರಿ ಕಚೇರಿ ದೂರವಾಣಿ ಸಂಖ್ಯೆ 08272-225528, 96861386888 ಮತ್ತು ಪ್ರಾಂಶುಪಾಲರು ಡಾ.ಎ.ಪಿ.ಜೆ ಅಜ್ದುಲ್ ಕಲಾಂ ವಸತಿ ಶಾಲೆ, ಕ್ಯಾತೆ ಗ್ರಾಮ ಕೊಡ್ಲಿಪೇಟೆ, ಸೋಮವಾರಪೇಟೆ ತಾಲ್ಲೂಕು, ದೂರವಾಣಿ ಸಂಖ್ಯೆ 7676473767 ನ್ನು ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಆರ್. ಕೃಷ್ಣಮೂರ್ತಿ ಅವರು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular