ತುಮಕೂರು: ಏಷ್ಯಾದಲ್ಲಿ ಅತಿ ದೊಡ್ಡ ಮಾರುಕಟ್ಟೆ ಎಂದು ಹೆಸರಾಗಿರುವ ತಿಪಟೂರು ಕೊಬ್ಬರಿ ಮಾರುಕಟ್ಟೆಯಲ್ಲಿ ಉಂಡೆ ಕೊಬ್ಬರಿ ದರ ಕ್ವಿಂಟಾಲ್ ಗೆ 30 ಸಾವಿರ ರೂ. ಗಡಿ ದಾಟಿದ್ದು, ರೈತರಲ್ಲಿ ಸಂತಸ ತಂದಿದೆ.
ಗುರುವಾರದ ಹರಾಜಿನಲ್ಲೇ ಕ್ವಿಂಟಾಲ್ ಕೊಬ್ಬರಿ ಬೆಲೆ ಗರಿಷ್ಠ 29,106 ರೂಪಾಯಿಗೆ ಟೆಂಡರ್ ಆಗಿದ್ದು, ಸಂಜೆ ವೇಳೆಗೆ 30,000 ರೂ. ಗಡಿ ದಾಟಿದೆ ಕಳೆದ. ಕಳೆದ ವರ್ಷ ಇದೇ ಅವಧಿಯಲ್ಲಿ ಕ್ವಿಂಟಾಲ್ ಕೊಬ್ಬರಿ ದರ 9000 ರೂ. ಆಸುಪಾಸಿನಲ್ಲಿತ್ತು.
ಹೆಚ್ಚಿನ ಸಿಹಿ ಮತ್ತು ಗುಣಮಟ್ಟದ ಎಣ್ಣೆ ಅಂಶಗಳನ್ನು ಒಳಗೊಂಡ ತಿಪಟೂರು ಉಂಡೆ ಕೊಬ್ಬರಿಗೆ ಬೇಡಿಕೆ ಇದೆ. ಬರುವ ಶ್ರಾವಣ ಮಾಸದಲ್ಲಿ ಸಾಲು ಸಾಲು ಹಬ್ಬ, ಸಮಾರಂಭ ಕಾರ್ಯಕ್ರಮ ಶುರುವಾಗುವುದರಿಂದ ಕೊಬ್ಬರಿಗೆ ಬೇಡಿಕೆ ಬಂದಿದೆ. ಕೆಲವೇ ವಾರಗಳಲ್ಲಿ ಕೊಬ್ಬರಿ ದರ 35 ರಿಂದ 40 ಸಾವಿರ ರೂಪಾಯಿಗೆ ತಲುಪುವ ನಿರೀಕ್ಷೆ ರೈತರಲ್ಲಿದೆ.