ಬೆಂಗಳೂರು : ರಾಜ್ಯದಲ್ಲಿ ಪ್ಯಾರಾಸಿಟಮಲ್ ಸೇರಿ 15 ಔಷಧಗಳನ್ನು ನಿಷೇಧಿಸಲಾಗಿದೆ. ಕರ್ನಾಟಕದ ಔಷಧ ಪರೀಕ್ಷಾ ಪ್ರಯೋಗಾಲಯವು ಈ ಕೆಳಗಿನ ಔಷಧಗಳು/ಸೌಂದರ್ಯವರ್ಧಕಗಳನ್ನು ‘ಪ್ರಮಾಣೀಕೃತ ಗುಣಮಟ್ಟದಲ್ಲಿಲ್ಲ’ ಎಂದು ಅಭಿಪ್ರಾಯಪಟ್ಟಿದೆ.
ಎಲ್ಲಾ ಔಷಧ ಮಾರಾಟಗಾರರು, ವೈದ್ಯರು, ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಂಗಳು ಈ ಉತ್ಪನ್ನಗಳನ್ನು ಸಂಗ್ರಹಿಸುವುದು/ಮಾರಾಟ ಮಾಡುವುದು/ಬಳಸುವುದನ್ನು ತಕ್ಷಣವೇ ನಿಲ್ಲಿಸಬೇಕೆಂದು ನಾನು ಮನವಿ ಮಾಡುತ್ತೇನೆ. ಆಸ್ಪತ್ರೆ, ಔಷಧ ಮಳಿಗೆಗಳಲ್ಲಿ ಯಾವುದೇ ಸಂಗ್ರಹ ಇದ್ದರೆ, ನಿಮ್ಮ ಸ್ಥಳೀಯ ಔಷಧ ನಿರೀಕ್ಷಕರು ಅಥವಾ ಸಹಾಯಕ ಔಷಧ ನಿಯಂತ್ರಕರಿಗೆ ತಕ್ಷಣವೇ ತಿಳಿಸಿ.
ನಿಮ್ಮ ಸುರಕ್ಷತೆ ನಮ್ಮ ಆದ್ಯತೆ. ದಯವಿಟ್ಟು ಈ ಕೆಳಗೆ ಪಟ್ಟಿ ಮಾಡಲಾದ ಬ್ಯಾಚ್ನ ಔಷಧಗಳು/ಸೌಂದರ್ಯವರ್ಧಕಗಳನ್ನು ಬಳಸಬೇಡಿ. ಈ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ .
Drugs Testing Laboratory, Karnataka, has opined that the following drugs/cosmetics as "Not of Standard Quality".
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) June 25, 2025
I urge all chemists, doctors, hospitals & nursing homes to IMMEDIATELY stop stocking/selling/using these products. If you have any stock, inform your local Drugs… pic.twitter.com/WDdwpv1QGf