ಬೆಂಗಳೂರು: ಕರ್ನಾಟಕದಲ್ಲಿ ಬೆಳೆಯುವ ನೇರಳೆ ಹಣ್ಣು ಜಾಗತಿಕ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇದೇ ಮೊದಲ ಬಾರಿಗೆ ನೇರಳೆ ಹಣ್ಣನ್ನು ಕರ್ನಾಟಕದಿಂದ ಲಂಡನ್‌ಗೆ ರಫ್ತು ಮಾಡಲಾಗುತ್ತಿದೆ.
ದೇಶದ ವಿವಿಧ ಭಾಗಗಳ ಸಾಂಪ್ರದಾಯಿಕ ಹಣ್ಣುಗಳನ್ನು ಜಾಗತಿಕ ಮಾರುಕಟ್ಟೆಗೆ ತಲುಪಿಸುವಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಡಿಸಿಎಂ ಡಿ.ಕೆ. ಶಿವಕುಮಾರ್, ನಮ್ಮ ನೆರಳೆ ಜಾಗತಿಕ ಮಟ್ಟಕ್ಕೆ! ಮೊದಲ ಬಾರಿಗೆ ಕರ್ನಾಟಕದ ತಾಜಾ ನೇರಳೆ ಹಣ್ಣುಗಳನ್ನು ಲಂಡನ್‌ಗೆ ರಫ್ತು ಮಾಡಲಾಗಿದೆ. ಇದು ನಮ್ಮ ರೈತರಿಗೆ ಮತ್ತು ರಾಜ್ಯಕ್ಕೆ ಹೆಮ್ಮೆಯ ಮೈಲಿಗಲ್ಲು. ಈ ರವಾನೆಯು ಕೇವಲ ಸಾಗಣೆಗಿಂತ ಹೆಚ್ಚಿನದನ್ನು ಸೂಚಿಸುತ್ತದೆ. ಇದು ಬೆಳೆಯುತ್ತಿರುವ ಭವಿಷ್ಯವನ್ನು ಸೂಚಿಸುತ್ತದೆ. ಏಕೆಂದರೆ ಇದು ಕೇವಲ ಒಂದು ಹಣ್ಣಿನ ಬಗ್ಗೆ ಅಲ್ಲ. ಇದು ರೈತರ ಆದಾಯವನ್ನು ದ್ವಿಗುಣಗೊಳಿಸುವುದು ಎಂದು ತಿಳಿಸಿದ್ದಾರೆ.

