HomeLatest NewsSHOCKING : ರೈಲಿನಲ್ಲಿ ಸೀಟಿಗಾಗಿ ಗಲಾಟೆ ; ಓರ್ವನ ಕೊಲೆಯಲ್ಲಿ ಅಂತ್ಯ | Watch Video

SHOCKING : ರೈಲಿನಲ್ಲಿ ಸೀಟಿಗಾಗಿ ಗಲಾಟೆ ; ಓರ್ವನ ಕೊಲೆಯಲ್ಲಿ ಅಂತ್ಯ | Watch Video

ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಚಲಿಸುತ್ತಿದ್ದ ರೈಲಿನಲ್ಲಿ ಸೀಟು ವಿಚಾರವಾಗಿ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ. ಸಹರಾನ್‌ಪುರ-ದೆಹಲಿ ಪ್ಯಾಸೆಂಜರ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ 39 ವರ್ಷದ ದೀಪಕ್ ಯಾದವ್ ಎಂಬವನ ಮೇಲೆ 15 ರಿಂದ 20 ಜನರ ಗುಂಪು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ಆತ ಸಾವನ್ನಪ್ಪಿದ್ದಾನೆ.

ಘಟನೆ ಫಕರ್‌ಪುರ್ ನಿಲ್ದಾಣದ ಬಳಿ ನಡೆದಿದೆ. ದೀಪಕ್ ಸೀಟಿನಲ್ಲಿ ಕೂರುವ ವಿಚಾರವಾಗಿ ಜಗಳಕ್ಕೆ ಇಳಿದಿದ್ದಾರೆ. ಈ ವಾಗ್ವಾದ ತಾರಕಕ್ಕೇರಿ, ನಂತರ 15 ರಿಂದ 20 ಪ್ರಯಾಣಿಕರು ಒಟ್ಟಾಗಿ ದೀಪಕ್ ಮೇಲೆ ಕೈ, ಕಾಲು, ಬೆಲ್ಟ್ ಹಾಗೂ ಹರಿತವಾದ ಆಯುಧಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

ಹಲ್ಲೆ ನಡೆಸಿದ ಗುಂಪು ದೀಪಕ್‌ನನ್ನು ಸಾಯುವ ಸ್ಥಿತಿಯಲ್ಲಿ ನಿಲ್ದಾಣದಲ್ಲಿ ಬಿಟ್ಟು ಪರಾರಿಯಾಗಿದೆ. ಮಾಹಿತಿ ತಿಳಿದ ಕೂಡಲೇ ಕುಟುಂಬದವರು ನಿಲ್ದಾಣಕ್ಕೆ ಧಾವಿಸಿದ್ದಾರೆ, ಆದರೆ ಅಷ್ಟರಾಗಲೇ ದೀಪಕ್ ಮೃತಪಟ್ಟಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಘಟನೆಯ ವಿಡಿಯೋವೊಂದು ವೈರಲ್ ಆಗಿದ್ದು, ದೀಪಕ್‌ಗೆ ಥಳಿಸುತ್ತಿರುವ ಜನರ ಗುಂಪು ಎಷ್ಟು ದೊಡ್ಡದಿದೆ ಎಂದರೆ ವಿಡಿಯೋದಲ್ಲಿ ದೀಪಕ್ ಕಾಣಿಸುವುದೇ ಇಲ್ಲ. ಜನರು ಆತನಿಗೆ ಥಳಿಸಲು ನೂಕುನುಗ್ಗಲು ನಡೆಸುತ್ತಿರುವುದು ಕಂಡುಬರುತ್ತದೆ.

ಕುಟುಂಬದ ಪ್ರತಿಕ್ರಿಯೆ

ವರದಿಗಳ ಪ್ರಕಾರ, ದೀಪಕ್ ಬಾಗ್‌ಪತ್‌ನ ಖೇಕ್ರ ಪಟ್ಟಣದ ನಿವಾಸಿಯಾಗಿದ್ದು, ದೆಹಲಿ-ಭಗೀರಥ್ ಪ್ಯಾಲೇಸ್‌ನಲ್ಲಿ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದರು. ಯುವಕನೊಬ್ಬನಾದ ರಾಹುಲ್ ಬಾಬಾ ಮತ್ತು ಅವನ ಸ್ನೇಹಿತರು ಈ ಕೃತ್ಯದ ಹಿಂದೆ ಇದ್ದಾರೆ ಎಂದು ದೀಪಕ್ ಕುಟುಂಬ ಆರೋಪಿಸಿದೆ.

For Latest News Updates, Join Our Whatsapp Community🚩
RELATED ARTICLES

Most Popular