ಹಳೆ ವಾಹನ ಮಾಲೀಕರಿಗೆ ಬಿಗ್ ಶಾಕ್..! ಜುಲೈ 1 ರಿಂದ ಬಂಕ್ ನಲ್ಲಿ ಪೆಟ್ರೋಲ್, ಡೀಸೆಲ್ ಹಾಕಲ್ಲ: ಸಾರಿಗೆ ಇಲಾಖೆಯಿಂದ ಹಳೆ ವಾಹನ ಮುಟ್ಟುಗೋಲು

ನವದೆಹಲಿ: ದೆಹಲಿಯಲ್ಲಿ 15 ವರ್ಷಕ್ಕಿಂತ ಹಳೆಯ ಪೆಟ್ರೋಲ್ ಮತ್ತು 10 ವರ್ಷಕ್ಕಿಂತ ಹಳೆಯ ಡೀಸೆಲ್ ವಾಹನಗಳಿಗೆ ಜುಲೈ 1 ರಿಂದ ಇಂಧನ ನೀಡುವುದಿಲ್ಲ ಎಂದು ವಾಯು ಗುಣಮಟ್ಟ ನಿರ್ವಹಣಾ ಆಯೋಗ ತಿಳಿಸಿದೆ.

15 ವರ್ಷ, 10 ವರ್ಷ ಜೀವಿತಾವಧಿ ಮುಗಿದ ಎಲ್ಲಾ ವಾಹನಗಳಿಗೆ ಇದು ಅನ್ವಯವಾಗಲಿದೆ ಎಂದು ವಾಯು ಗುಣಮಟ್ಟ ನಿರ್ವಹಣಾ ಆಯೋಗ ಎಲ್ಲಾ ಇಂಧನ ಸ್ಟೇಷನ್ ಗಳಿಗೆ ಏಪ್ರಿಲ್ ನಲ್ಲೇ ನಿರ್ದೇಶನ ನೀಡಿದೆ.

ದೆಹಲಿಗೆ 520 ಇಂಧನ ಸ್ಟೇಷನ್ ಗಳ ಪೈಕಿ 500ರಲ್ಲಿ ಸ್ವಯಂ ಚಾಲಿತ ಸಂಖ್ಯಾ ಫಲಕ ಪತ್ತೆ ಕ್ಯಾಮರಾ ಅಳವಡಿಸಲಾಗಿದೆ. ಹಳೆಯ ವಾಹನಗಳು ಪೆಟ್ರೋಲ್ ಬಂಕ್ ಗಳಿಗೆ ಬಂದಾಗ ಈ ಕ್ಯಾಮರಾಗಳು ನಿಯಂತ್ರಣ ಕೊಠಡಿಗೆ ಎಚ್ಚರಿಕೆ ಸಂದೇಶ ರವಾನಿಸಲಿದ್ದು, ಆಗ ಸಾರಿಗೆ ಇಲಾಖೆ ಅಧಿಕಾರಿಗಳು ಅಂತಹ ಹಳೆಯ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read