ತುಮಕೂರು: ಸಹಕಾರ ಸಚಿವ ಕೆ.ಎನ್. ರಾಜಣ್ಣ ಅಭಿನಂದನಾ ಸಮಾರಂಭದ ಬಳಿಕ ಮಹಿಳೆಗೆ ಹೃದಯಘಾತ ಉಂಟಾಗಿದೆ.
ಹೃದಯಘಾತದಿಂದ ಸೀಗೇಹಳ್ಳಿ ನಿವಾಸಿ ಸುನಂದಮ್ಮ ಸಾವನ್ನಪ್ಪಿದ್ದಾರೆ. ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಸೀಗೇಗೆಹಳ್ಳಿ ನಿವಾಸಿಯಾಗಿರುವ ಸುನಂದಮ್ಮ ಅಭಿನಂದನಾ ಸಮಾರಂಭ ಮುಗಿಸಿ ಬಸ್ ನಲ್ಲಿ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ.
ತುಮಕೂರಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಅಭಿನಂದನಾ ಸಮಾರಂಭ ನಡೆದಿತ್ತು. ಈ ಸಮಾರಂಭದಲ್ಲಿ ಭಾಗವಹಿಸಿದ ಬಳಿಕ ಅವರು ಮನೆಗೆ ತೆರಳುತ್ತಿದ್ದ ವೇಳೆಯಲ್ಲಿ ಹೃದಯಘಾತ ಸಂಭವಿಸಿದೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.