HomeLatest NewsBIG NEWS: ಕಾಲ್ತುಳಿತ ದುರಂತ: ವಿಚಾರಣೆಗೆ ಗೈರಾದ ಬಿ.ದಯಾನಂದ್!

BIG NEWS: ಕಾಲ್ತುಳಿತ ದುರಂತ: ವಿಚಾರಣೆಗೆ ಗೈರಾದ ಬಿ.ದಯಾನಂದ್!

ಬೆಂಗಳೂರು: ಆರ್ ಸಿಬಿ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ದುರಂತದಲ್ಲಿ 11 ಜನರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿ.ದಯಾನಂದ್ ವಿಚಾರಣೆಗೆ ಗೈರಾಗಿದ್ದಾರೆ.

ಬೆಂಗಳೂರು ನಗರ ಜಿಲ್ಲಾಧಿಕಾರಿಯೂ ಆಗಿರುವ ತನಿಖಾಧಿಕಾರಿ ಜಿ.ಜಗದೀಶ್ ಅವರು ಇಬ್ಬರು ಡಿಸಿಪಿಗಳು ಸೇರಿ ಆರು ಪೊಲೀಸ್ ಅಧಿಕಾರಿಗಳ ವಿಚಾರಣೆಯನ್ನು ನಡೆಸಿದರು. ಆದರೆ ಬೆಂಗಳೂರು ನಗರ ಮಾಜಿ ಪೊಲೀಸ್ ಆಯುಕ್ತ ಬಿ.ದಯಾನಂದ್ ಮಾತ್ರ ವಿಚಾರಣೆಗೆ ಗೈರಾಗಿದ್ದಾರೆ.

ಪ್ರಕರಣ ಸಂಬಂಧ ಒಟ್ಟು 40ಕ್ಕೂ ಅಧಿಕ ಪೊಲೀಸರ ವಿಚರಣೆ ನಡೆಸಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಆದರೆ ಮಾಜಿ ಕಮಿಷನರ್ ಬಿ.ದಯಾನಂದ್ ಮಾತ್ರ ವಿಚಾರಣೆಗೆ ಹಾಜರಾಗಿಲ್ಲ. ತನಿಖಾಧಿಕಾರಿ ಜಗದೀಶ್ ಒಟ್ಟು 45 ಮಂದಿ ಪೊಲೀಸರಿಗೆ ನೋಟಿಸ್ ನೀಡಿದ್ದರು. ಹಂತ ಹಂತವಾಗಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸುತ್ತಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular