HomeLatest Newsರಾಜ್ಯದ ಎಲ್ಲಾ ಕಾಲೇಜುಗಳಲ್ಲಿ 'ಅಂತರರಾಷ್ಟ್ರೀಯ ಯೋಗ ದಿನ' ಆಚರಿಸಲು ಸೂಚನೆ

ರಾಜ್ಯದ ಎಲ್ಲಾ ಕಾಲೇಜುಗಳಲ್ಲಿ ‘ಅಂತರರಾಷ್ಟ್ರೀಯ ಯೋಗ ದಿನ’ ಆಚರಿಸಲು ಸೂಚನೆ

ಬೆಂಗಳೂರು: ಎಲ್ಲಾ ಸರ್ಕಾರಿ, ಖಾಸಗಿ ಅನುದಾನಿತ, ಅನುದಾನ ರಹಿತ ಪ್ರಥಮ ದರ್ಜೆ ಕಾಲೇಜುಗಳು ಹಾಗೂ ಪಾಲಿಟೆಕ್ನಿಕ್/ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಜೂನ್ 21, 2025 ರಂದು ‘ಅಂತರರಾಷ್ಟ್ರೀಯ ಯೋಗ ದಿವಸ’ವನ್ನು ಆಚರಿಸುವಂತೆ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ಸೂಚನೆ ನೀಡಿದ್ದಾರೆ.

ವಿಶ್ವಸಂಸ್ಥೆಯು ಜೂನ್ 21 ನ್ನು ‘ಅಂತರರಾಷ್ಟ್ರೀಯ ಯೋಗ ದಿನ’ ವನ್ನಾಗಿ ಘೋಷಿಸಿದೆ. ಯೋಗ ಭಾರತದ ಪ್ರಾಚೀನ ಸಂಪ್ರದಾಯದ ಒಂದು ಅತ್ಯಮೂಲ್ಯ ಕೊಡುಗೆಯಾಗಿದೆ. ಇದು ಮನಸ್ಸು ಮತ್ತು ದೇಹದ ಐಕ್ಯತೆಯನ್ನು ಸಾಕಾರಗೊಳಿಸಿದೆ. ಯೋಗವು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಲೇಬೇಕಾದ ಉತ್ತಮ ಜೀವನ ನಿರ್ವಹಣೆಯ ಒಂದು ವಿಜ್ಞಾನವಾಗಿದೆ. ಇದು ಒಬ್ಬ ಮನುಷ್ಯನ ಶಾರೀರಿಕರವಾದ, ಚೇತನಾತ್ಮಕವಾದ ಭೌದ್ಧಿಕವಾದ. ಭಾವನಾತ್ಮಕವಾದ, ಮಾನಸಿಕ ಮತ್ತು ಆಧ್ಯಾತ್ಮಿಕವಾದ ಎಲ್ಲಾ ಸ್ತರಗಳಲ್ಲಿಯೂ ಕಲಸ ಮಾಡುತ್ತದ. ಇದು ಇಂದಿನ ಮತ್ತು ಭವಿಷ್ಯದ ಅಗತ್ಯವೂ ಆಗಿದೆ. ಯೋಗಾಭ್ಯಾಸ ಮಾಡುವುದರಿಂದ ಭಾವನಾತ್ಮಕ, ಮಾನಸಿಕ ಮತ್ತು ಶಾರೀರಿಕ ಹಂತಗಳ ಆಂತರಿಕ ಸಂಬಂಧಗಳ ಬಗ್ಗೆ ಮತ್ತು ಇವುಗಳಲ್ಲಿ ಯಾವುದಾದರೊಂದು ಅವ್ಯವಸ್ಥಿತವಾದರೆ, ಇನ್ನಿತರ ಹಂತಗಳ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬ ತಿಳುವಳಿಕೆಯು ಮೂಡುತ್ತದೆ.

ಭಾರತ ಸರ್ಕಾರದ ಆಯುಷ್ ಸಚಿವಾಲಯವು ಜೂನ್ 21, 2025 ರಂದು ಬೆಳಿಗ್ಗೆ 7:00 ರಿಂದ 7:45 ರವರೆಗೆ ‘ಅಂತರರಾಷ್ಟ್ರೀಯ ಯೋಗ ದಿವಸ’-2025 ಥೀಮ್ “Yoga for One Earth, One Health” ರಡಿಯಲ್ಲಿ ಪ್ರಮುಖ ಕಾರ್ಯಕ್ರಮವಾದ ‘ಯೋಗ ಸಂಗಮ’ವನ್ನು ಆಯೋಜಿಸುತ್ತಿದ್ದು, ಈ ಸಾಮೂಹಿಕ ಯೋಗ ಪ್ರದರ್ಶನವು ಸಾಮಾನ್ಯ ಯೋಗ ಪ್ರೋಟೋಕಾಲ್ (CYP) ಅನ್ನು ಆಧರಿಸಿದ ಮತ್ತು ಭಾರತದ 1,00,000+ ಸ್ಥಳಗಳಲ್ಲಿ ಏಕಕಾಲದಲ್ಲಿ ನಡೆಯಲಿದೆ. ಸದರಿ ಯೋಗ ಸಂಗಮ ಕಾರ್ಯಕ್ರಮಕ್ಕೆ ಯೋಗ https://yoga.ayush.gov.in/yoga-sangam ದಾಯಿಸಿಕೊಳ್ಳಲು ಸೂಚಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಲಾಖಾ ವ್ಯಾಪ್ತಿಯ ಎಲ್ಲಾ ಸರ್ಕಾರಿ, ಖಾಸಗಿ ಅನುದಾನಿತ, ಅನುದಾನ ರಹಿತ ಪ್ರಥಮ ದರ್ಜೆ ಕಾಲೇಜುಗಳು ಹಾಗೂ ಪಾಲಿಟೆಕ್ನಿಕ್/ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಜೂನ್ 21, 2025 ರಂದು ‘ಅಂತರರಾಷ್ಟ್ರೀಯ ಯೋಗ ದಿವಸ’ವನ್ನು ಆಚರಿಸಿ. ಈ ಮೂಲಕ ವಿದ್ಯಾರ್ಥಿಗಳಲ್ಲಿ ‘ಯೋಗ’ ಮತ್ತು ಇದರ ಮಹತ್ವ ಹಾಗೂ ಪ್ರಯೋಜನಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular