HomeLatest NewsKEA ಚಾಟ್ ಬಾಟ್ ದಾಖಲೆ: 100 ದಿನದಲ್ಲಿ 5.15 ಲಕ್ಷ ಮಂದಿಗೆ ಉತ್ತರ

KEA ಚಾಟ್ ಬಾಟ್ ದಾಖಲೆ: 100 ದಿನದಲ್ಲಿ 5.15 ಲಕ್ಷ ಮಂದಿಗೆ ಉತ್ತರ

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಆರಂಭಿಸಿದ ಕೆಎಇ ಚಾಟ್ ಬಾಟ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕಾಗಿ ಅಭ್ಯರ್ಥಿಗಳ ಪ್ರಶ್ನೆ, ಗೊಂದಲಗಳ ನಿವಾರಣೆಗಾಗಿ ಕೆಇಎ ಆರಂಭಿಸಿದ ಚಾಟ್ ವಾಟ್ ಕೇವಲ ನೂರು ದಿನದಲ್ಲಿ 5.15 ಲಕ್ಷ ಪ್ರಶ್ನೆಗಳಿಗೆ ಉತ್ತರ ನೀಡಿ ದಾಖಲೆ ಬರೆದಿದೆ.

ವಿವಿಧ ನೇಮಕಾತಿ, ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಲಿಖಿತ ಪರೀಕ್ಷೆ ಮತ್ತು ಸೀಟು ಹಂಚಿಕೆ ಪ್ರಕ್ರಿಯೆಯನ್ನು ಪ್ರಾಧಿಕಾರ ನಡೆಸುತ್ತಿದೆ. ಅಭ್ಯರ್ಥಿಗಳು ಮತ್ತು ಪೋಷಕರಿಗೆ ಅಗತ್ಯವಾದ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಒದಗಿಸುವ ಮೂಲಕ ಜನಸ್ನೇಹಿ ಆಗುತ್ತಿದೆ. ತಂತ್ರಜ್ಞಾನದ ನೆರವಿನಿಂದ ವಿದ್ಯಾರ್ಥಿಗಳು, ಪೋಷಕರ ಪ್ರಶ್ನೆಗಳಿಗೆ ಯಾರ ಮಧ್ಯಸ್ಥಿಕೆಯೂ ಇಲ್ಲದೆ ಉತ್ತರ ಪಡೆಯುವ ವ್ಯವಸ್ಥೆ ಇದಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆರಂಭದಲ್ಲಿ ಇಂಗ್ಲಿಷ್ ನಲ್ಲಿ ಉತ್ತರಿಸುತ್ತಿದ್ದ ಬಾಟ್ ಈಗ ಕನ್ನಡದಲ್ಲಿ ಕೇಳುವ ಪ್ರಶ್ನೆಗಳಿಗೂ ಉತ್ತರಿಸುತ್ತಿದೆ. ನಿತ್ಯವೂ ಅದಕ್ಕೆ ಮಾಹಿತಿ ನೀಡುವ ಕೆಲಸವನ್ನು ಪ್ರಾಧಿಕಾರದ ತಂಡ ಮಾಡುತ್ತಿದ್ದು, ಯಾರು ಏನು ಕೇಳಿದರೂ ಅದಕ್ಕೆ ಉತ್ತರಿಸುವ ಕೆಲಸ ಮಾಡುತ್ತಿದೆ.

ಕೇಳಿದ ಪ್ರಶ್ನೆಗಳ ಪೈಕಿ ಕಳೆದ ವರ್ಷದ ರ್ಯಾಂಕ್ ಕುರಿತ ಪ್ರಶ್ನೆಗಳೇ ಅಧಿಕವಾಗಿವೆ. ಇದುವರೆಗೂ 2.7 ಲಕ್ಷ ಮಂದಿ ಕಟ್ ಆಫ್ ರ್ಯಾಂಕ್ ಕುರಿತು ಪ್ರಶ್ನೆ ಕೇಳಿ ಉತ್ತರ ಪಡೆದುಕೊಂಡಿದ್ದಾರೆ.

ಪ್ರವೇಶಾತಿ ಅರ್ಹತೆ, ಪರೀಕ್ಷಾ ವೇಳಾಪಟ್ಟಿ, ಮುಖ್ಯ ದಿನಾಂಕಗಳು, ಪ್ರವೇಶ ಪತ್ರ ಮೊದಲಾದವುಗಳ ಡೌನ್ಲೋಡ್ ಹೊಸ ಪ್ರಕಟಣೆ, ನೇಮಕಾತಿ ಮುಂತಾದವುಗಳನ್ನು ತಿಳಿಯಲು ಚಾಟ್ ಬಾಟ್ ಬಳಸಿಕೊಳ್ಳಲಾಗುತ್ತಿದೆ. ಅಭ್ಯರ್ಥಿಗಳಿಗೆ ಅಗತ್ಯವಾದ ಮಾಹಿತಿ ಒದಗಿಸಲು ಕೆಇಎ ವಿಕಸನ ಎನ್ನುವ ಯೂಟ್ಯೂಬ್ ಚಾನೆಲ್ ಕೂಡ ಆರಂಭಿಸಲಾಗಿದೆ. ಕೆಇಎ ಎಕ್ಸ್ ಸಾಮಾಜಿಕ ಜಾಲತಾಣವೂ ಕೂಡ ಜನಪ್ರಿಯವಾಗಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular