ಯುದ್ಧ ಈಗ ಆರಂಭವಾಗಲಿದೆ ಎಂದು ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಪೋಸ್ಟ್ ಹಾಕಿದ್ದಾರೆ.
ನಾವು ಯಾವುದೇ ಆಡಳಿತಕ್ಕೆ ತಕ್ಕ ತಿರುಗೇಟು ನೀಡುತ್ತೇವೆ. ಯೆಹೂದಿ ಆಡಳಿತಕ್ಕೆ ಯಾವುದೇ ಕರುಣೆ ತೋರಿಸುವುದಿಲ್ಲ ಎಂದು ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.
ಬುಧವಾರ ಮುಂಜಾನೆ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಸರಣಿ ಪೋಸ್ಟ್‌ಗಳಲ್ಲಿ ಇಸ್ರೇಲ್‌ನೊಂದಿಗೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ “ಯುದ್ಧ ಆರಂಭ” ಎಂದು ಹೇಳಿದ್ದಾರೆ. ಇದಕ್ಕೂ ಕೆಲವು ಗಂಟೆಗಳ ಹಿಂದೆ ಇರಾನ್‌ನ “ಬೇಷರತ್ತಾದ ಶರಣಾಗತಿ”ಗೆ ಕರೆ ನೀಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಚ್ಚುತ್ತಿರುವ ಬೆದರಿಕೆಗಳ ನಂತರ ಖಮೇನಿ ಅವರು ಪೋಸ್ಟ್ ಹಾಕಿ ತಿರುಗೇಟು ನೀಡಿದ್ದಾರೆ.
ನಾವು ಭಯೋತ್ಪಾದಕ ಜಿಯೋನಿಸ್ಟ್ ಆಡಳಿತಕ್ಕೆ ಬಲವಾದ ಪ್ರತಿಕ್ರಿಯೆ ನೀಡಬೇಕು. ನಾವು ಜಿಯೋನಿಸ್ಟ್‌ಗಳಿಗೆ ಕರುಣೆ ತೋರಿಸುವುದಿಲ್ಲ ಎಂದಿದ್ದಾರೆ.
ಖಮೇನಿ ಅವರ ಪೋಸ್ಟ್ ಗಳು ದಾಳಿಗಳನ್ನು ವಿಶಾಲವಾದ ಸೈದ್ಧಾಂತಿಕ ಹೋರಾಟದ ಭಾಗವಾಗಿ ರೂಪಿಸುವಂತೆ ಕಂಡುಬಂದಿದೆ. ಫಾರ್ಸಿ ಭಾಷೆಯಲ್ಲಿ ಅವರು “ಯುದ್ಧ ಪ್ರಾರಂಭವಾಗುತ್ತದೆ” ಎಂದು ಪೋಸ್ಟ್ ಮಾಡಿದ್ದಾರೆ, ಜೊತೆಗೆ ಖೈಬರ್‌ನ ಐತಿಹಾಸಿಕ ಯುದ್ಧವನ್ನು ಸೂಚಿಸುವ ಖಡ್ಗ ಹಿಡಿದ ವ್ಯಕ್ತಿಯ ಚಿತ್ರವಿದೆ.

